×
Ad

ಬೆಂಗಳೂರು: ಮತದಾರರ ಜಾಗೃತಿಗಾಗಿ ನಡಿಗೆ

Update: 2018-05-06 17:13 IST

ಬೆಂಗಳೂರು, ಮೇ 6: ಮತದಾರರ ಜಾಗೃತಿಗಾಗಿ ಮುಖ್ಯಚುನಾವಣಾಧಿಕಾರಿಗಳ ಕಚೇರಿಯ ವತಿಯಿಂದ ಇಂದು ನಗರದಲ್ಲಿ ವಾಕಥಾನ್ ಏರ್ಪಡಿಸಲಾಗಿತ್ತು.

ಕಂಠೀರವ ಕ್ರೀಡಾಂಗಣದಲ್ಲಿ ಈ ನಡಿಗೆಗೆ ಚಾಲನೆ ನೀಡಿದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು ಮಾತನಾಡಿ, ಮೇ 12 ರಂದು ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯ ವರೆಗೆ ಮತದಾನ ನಡೆಯಲಿದೆ. ಎಲ್ಲರೂ ತಪ್ಪದೇ ಮತದಾನ ಮಾಡಬೇಕು. ಯಾವುದೇ ಬೆದರಿಕೆ, ಆಮಿಷಗಳಿಗೆ ಜಗ್ಗದೆ ಮತ ಚಲಾಯಿಸಬೇಕು ಎಂದು ಅವರು ಮನವಿ ಮಾಡಿದರು.

ಈ ಕಾರ್ಯಕ್ರಮದಲ್ಲಿ ಹಾಜರಿದ್ದ ಖ್ಯಾತ ನಟ ಕಿಶೋರ್, ನಿರ್ದೇಶಕ ರಿಷಬ್ ಶೆಟ್ಟಿ, ಫಿಟ್ನೆಸ್ ತರಬೇತುದಾರರಾದ ವನಿತಾ ಅಶೋಕ್, ಮಿಸ್ ಕರ್ನಾಟಕ ಕಾಜಲ್ ಭಾಟಿಯಾ ಮತ್ತಿತರರು ಮತದಾನದ ಹಕ್ಕನ್ನು ಚಲಾಯಿಸುವುದು ನಮ್ಮಜವಾಬ್ದಾರಿ ಕೂಡ. ಮನೆಯಲ್ಲಿ ಕುಳಿತು ಆಳುವವರನ್ನು ಟೀಕಿಸುವ ಮುನ್ನ ನಾವು ಮತಚಲಾಯಿಸಿ, ನಮ್ಮ ಹೊಣೆಗಾರಿಕೆ ನಿಭಾಯಿಸಬೇಕು ಎಂಬ ಸಂದೇಶ ನೀಡಿದರು.

ನಂತರ ಕಂಠೀರವ ಕ್ರೀಡಾಂಗಣದಿಂದ ವಿಧಾನಸೌಧ, ನೃಪತುಂಗ ರಸ್ತೆಯ ಮೂಲಕಕಂಠೀರವ ಕ್ರೀಡಾಂಗಣದ ವರೆಗೆ ವಾಕಥಾನ್ ನಡೆಯಿತು. ಬಿಬಿಎಂಪಿ ಆಯುಕ್ತ ಮಹೇಶ್ವರ ರಾವ್, ಅಪರ ಮುಖ್ಯ ಚುನಾವಣಾಧಿಕಾರಿ ಡಾ.ಬಿ.ಆರ್. ಮಮತಾ, ಜಂಟಿ ಮುಖ್ಯಚುನಾವಣಾಧಿಕಾರಿ ಸೂರ್ಯಸೇನ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತಡಾ. ಹರ್ಷ ಪಿ.ಎಸ್., ಬಿಬಿಎಂಪಿ ವಿಶೇಷ ಆಯುಕ್ತ ಎಸ್.ಜಿ. ರವೀಂದ್ರ ಮೊದಲಾದವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News