ಹಣ ನೀಡುತ್ತೇವೆಂದು ಅಭ್ಯರ್ಥಿಗಳಿಗೇ ಮೋಸ ಮಾಡಿದ ಎಂಇಪಿ ಪಕ್ಷ: ಆರೋಪ

Update: 2018-05-06 14:58 GMT

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಬೆಂಗಳೂರು, ಮೇ 6: ಪಕ್ಷದ ನಿಧಿಯಿಂದ ಹಣಕಾಸು ನೆರವು ನೀಡಲಾಗುತ್ತಿದೆ ಎಂದು ಭರವಸೆ ನೀಡಿದ್ದ ಮಹಿಳಾ ಎಂಪವರ್ ಮೆಂಟ್ ಪಾರ್ಟಿ ಸ್ಥಾಪಕಿ ನೌಹೇರಾ ಶೇಖ್ ಇದೀಗ ಯಾವ ಹಣವೂ ನೀಡುವುದಿಲ್ಲ ಎಂದು ಹೇಳಿ ಅಭ್ಯರ್ಥಿಗಳಿಗೆ ಮೋಸ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಎಂಇಪಿ ಅಭ್ಯರ್ಥಿಗಳು ನೌಹೇರಾ ಶೇಖ್ ಗೆ ಮುತ್ತಿಗೆ ಹಾಕಿದ್ದಾರೆ ಎನ್ನಲಾದ ವಿಡಿಯೋಗಳು, ಫೋಟೊಗಳು ಹಾಗು 'ಎಂಇಪಿ ಪಕ್ಷ 420 ಪಕ್ಷ' ಎನ್ನುವ ಆಡಿಯೋ ಕ್ಲಿಪ್ಪಿಂಗ್ ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

"ವಿಲಾಸಿ ಲೀಲಾ ಪ್ಯಾಲೇಸ್ ಹೊಟೇಲ್ ನಲ್ಲಿ ಎಂಇಪಿ ಪಕ್ಷದ ಅಭ್ಯರ್ಥಿಗಳು ನೌಹೇರಾರನ್ನು ಭೇಟಿಯಾಗಿದ್ದರು. 213 ಜನರಿಗೆ ಬಿ ಫಾರಂ ನೀಡಿದ್ದು, ಅಭ್ಯರ್ಥಿಗಳು ಕೈಯಲ್ಲಿದ್ದ ಎಲ್ಲಾ ಹಣವೂ ಖಾಲಿಯಾಗಿದೆ. ಪಕ್ಷದ ನಿಧಿಯಿಂದ ಎಲ್ಲರಿಗೂ ಹಣ ನೀಡಲಾಗುವುದು ಎಂದು ನೀವು ಕೊಟ್ಟ ಭರವಸೆಯನ್ನು ಈಡೇರಿಸಬೇಕು ಎಂದು ನೌಹೇರಾರಲ್ಲಿ ಹೇಳಲಾಯಿತು. ಆದರೆ ಇದಕ್ಕೆ ನಿರಾಕರಿಸಿದ ನೌಹೇರಾ ನಾನು 1 ರೂ. ಕೂಡ ಹಣ ನೀಡುತ್ತೇನೆಂದು ಯಾರಲ್ಲೂ ಹೇಳಿಲ್ಲ. ಯಾವ ಭರವಸೆಯನ್ನೂ ನೀಡಿಲ್ಲ ಎಂದು ಹೇಳಿದರು. ಎಲ್ಲಾ ಅಭ್ಯರ್ಥಿಗಳು ಲೀಲಾ ಪ್ಯಾಲೇಸ್ ಮುಂದೆ ಪ್ರತಿಭಟನೆ ಮಾಡುತ್ತಿದ್ದೇವೆ. 7ನೆ ತಾರೀಕಿನಂದು ಲೀಲಾ ಪ್ಯಾಲೇಸ್ ನಿಂದ ಅವರು ತೆರಳುತ್ತಿದ್ದಾರೆ. ಎಂಇಪಿ ಪಕ್ಷ ಪಕ್ಕಾ 420. ಬಿಜೆಪಿ ಹೈಕಮಾಂಡ್ ಜೊತೆ ಶಾಮೀಲಾಗಿ ಕೋಟ್ಯಾಂತರ ರೂ. ಹಣ ಪಡೆದು ಎಲ್ಲರನ್ನೂ ಬಲಿಪಶು ಮಾಡಿದ್ದಾರೆ" ಎಂದು ಅಭ್ಯರ್ಥಿಯೋರ್ವರು ಆರೋಪಿಸುತ್ತಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಈ ಬಗೆಗಿನ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಇದು ಎಲ್ಲಿ ಹಾಗು ಯಾವಾಗ ನಡೆದ ಪ್ರತಿಭಟನೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. 

‘ಎಂಇಪಿ ಪಕ್ಷದಿಂದ ಸ್ಪರ್ಧಿಸಿರುವ ಕೆಲ ಅಭ್ಯರ್ಥಿಗಳು ಕೋಟಿ ಕೋಟಿ ರೂ. ಹಣ ನೀಡಬೇಕೆಂದು ಬ್ಲಾಕ್‌ಮೇಲ್ ಮಾಡುತ್ತಿದ್ದು, ತಮ್ಮ ಪಕ್ಷದಿಂದ ಹಣ ನೀಡುವ ಸಂಪ್ರದಾಯವಿಲ್ಲ. ಇದು ಚುನಾವಣಾ ಆಯೋಗದ ನೀತಿ ಸಂಹಿತೆ ಉಲ್ಲಂಘನೆ. ಆದುದರಿಂದ ಯಾವೊಬ್ಬ ಅಭ್ಯರ್ಥಿಗೂ ಪಾರ್ಟಿ ಪಂಡ್ ಎಂದು ಹಣ ನೀಡುವುದಿಲ್ಲ’
-ಡಾ.ನೌಹೀರಾ ಶೇಖ್ ಎಂಇಪಿ ರಾಷ್ಟ್ರೀಯಾಧ್ಯಕ್ಷೆ

Full View Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News