ದುಬೈ: ರಮಝಾನ್ ಡೇರೆಗಳಲ್ಲಿ ಹೊಗೆಬತ್ತಿ ನಿಷೇಧ

Update: 2018-05-08 18:30 GMT

ದುಬೈ, ಮೇ 8: ದುಬೈಯಾದ್ಯಂತ ಇರುವ ರಮಾಝಾನ್ ಡೇರೆಗಳಲ್ಲಿ ಹೊಗೆಬತ್ತಿ ಸೇದುವುದನ್ನು ದುಬೈ ಮುನಿಸಿಪಾಲಿಟಿ ನಿಷೇಧಿಸಿದೆ.

ಮುಸ್ಸಂಜೆಯಿಂದ ರಾತ್ರಿ 9 ಗಂಟೆಯವರೆಗೆ ಇಫ್ತಾರ್ ಅವಧಿಯಲ್ಲಿ ನಿಷೇಧ ಚಾಲ್ತಿಯಲ್ಲಿರುತ್ತದೆ.

ಅಪ್ರಾಪ್ತ ವಯಸ್ಕರು, ಗರ್ಭಿಣಿಯರು ಮತ್ತು ಹೊಗೆಬತ್ತಿ ಸೇದದವರನ್ನು ಹೊಗೆಬತ್ತಿ ಸೇವನೆಯ ಹಾನಿಕಾರಕ ಪರಿಣಾಮಗಳಿಂದ ರಕ್ಷಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ.

ಮುನಿಸಿಪಾಲಿಟಿಯು ಪ್ರಸಕ್ತ ರಮದಾನ್ ಟೆಂಟ್ ಪರ್ಮಿಟ್‌ಗಳ ಅರ್ಜಿಗಳ ಪರಿಶೀಲನೆ ನಡೆಸುತ್ತಿದೆ.

ಎರಡು ಟೆಂಟ್ ಪರ್ಮಿಟ್‌ಗಳನ್ನು ಈಗಾಗಲೇ ನೀಡಲಾಗಿದೆ ಹಾಗೂ 8 ಅರ್ಜಿಗಳು ಪರಿಶೀಲನೆಯಲ್ಲಿವೆ ಎಂದು ದುಬೈ ಮುನಿಸಿಪಾಲಿಟಿಯ ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷಾ ಇಲಾಖೆಯ ಉಸ್ತುವಾರಿ ನಿರ್ದೇಶಕ ಡಾ. ನಸೀಮ್ ರಫಿ ತಿಳಿಸಿದರು.

ತಂಬಾಕು ನಿಯಂತ್ರಣಕ್ಕೆ ಸಂಬಂಧಿಸಿದ 2009ರ ಕಾನೂನಿನ ವಿಧಿಗಳನ್ನು ಪಾಲಿಸುವಂತೆ ರಮಾಝಾನ್ ಟೆಂಟ್‌ಗಳ ಉಸ್ತುವಾರಿ ಹೊಂದಿರುವ ಎಲ್ಲ ಸಂಸ್ಥೆಗಳಿಗೆ ದುಬೈ ಮುನಿಸಿಪಾಲಿಟಿ ಸೂಚನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News