ಅರಬ್ ಯುವಕರ ನೆಚ್ಚಿನ ವಾಸ ತಾಣ ಯುಎಇ

Update: 2018-05-08 18:40 GMT

ದುಬೈ, ಮೇ 8: ಅರಬ್ ಯುವಕರು ವಾಸಿಸಲು ಬಯಸುವ ದೇಶಗಳ ಪೈಕಿ ಯುಎಇ ಅಗ್ರಸ್ಥಾನದಲ್ಲಿದೆ.

ತಮ್ಮ ದೇಶಗಳು ಯುಎಇ ಮಾದರಿಯನ್ನು ಅನುಸರಿಸಬೇಕು ಎಂಬುದಾಗಿ ಸತತ 7ನೇ ವರ್ಷ ಹೆಚ್ಚಿನ ಸಂಖ್ಯೆಯ ಅರಬ್ ಯುವಕರು ಬಯಸಿದ್ದಾರೆ ಎಂದು ಎಎಸ್‌ಡಿಎ’ಎ ಬರ್ಸನ್ ಮಾರ್ಸ್‌ಟೆಲ್ಲರ್ ನಡೆಸಿದ ‘10ನೇ ಅರಬ್ ಯುವ ಸಮೀಕ್ಷೆ 2018’ ತಿಳಿಸಿದೆ.

ಯುಎಇ ತಾವು ವಾಸಿಸಲು ಬಯಸುವ ದೇಶ ಎಂಬುದಾಗಿ 16 ಅರಬ್ ದೇಶಗಳ ಸಂದರ್ಶಿಸಲ್ಪಟ್ಟ ಪ್ರತಿ ಮೂವರು ಯುವಕರ ಪೈಕಿ ಒಂದಕ್ಕೂ ಹೆಚ್ಚು ಮಂದಿ ಹೇಳಿದ್ದಾರೆ. ಅಂದರೆ, ಇದು 35 ಶೇಕಡಕ್ಕೂ ಅಧಿಕವಾಗಿದೆ. ಸಮೀಕ್ಷೆಯಲ್ಲಿ ಅಮೆರಿಕ ಮತ್ತು ಕೆನಡದ ಪರವಾಗಿ ತಲಾ 18 ಶೇಕಡ ಅಭಿಮತ ವ್ಯಕ್ತವಾದರೆ, ಜರ್ಮನಿ ಪರವಾಗಿ 12 ಶೇಕಡ ಮತ್ತು ಸೌದಿ ಅರೇಬಿಯದ ಪರವಾಗಿ 16 ಶೇಕಡ ಒಲವು ವ್ಯಕ್ತವಾಯಿತು ಎಂದು ಮಂಗಳವಾರ ಬಿಡುಗಡೆ ಸಮೀಕ್ಷಾ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News