×
Ad

ನಾವು ಬಿಜೆಪಿ ಕಾರ್ಯಕರ್ತರು, ಜಾವಡೇಕರ್ ಸುಳ್ಳು ಹೇಳಿದ್ದು ಯಾಕೆಂದು ತಿಳಿದಿಲ್ಲ: ಮಂಜುಳಾ ಪುತ್ರ ಶ್ರೀಧರ್

Update: 2018-05-09 19:15 IST

ಬೆಂಗಳೂರು, ಮೇ 9: ತಾನು, ತನ್ನ ತಾಯಿ ಮಂಜುಳಾ ನಂಜಮರಿ ಹಾಗು ರಾಕೇಶ್ ಬಿಜೆಪಿ ಕಾರ್ಯಕರ್ತರಾಗಿದ್ದು, ಪ್ರಕಾಶ್ ಜಾವಡೇಕರ್ ಯಾಕೆ ಸುಳ್ಳು ಹೇಳಿದರೆಂದು ತಿಳಿಯುತ್ತಿಲ್ಲ ಎಂದು ಮಂಜುಳಾ ನಂಜಮರಿಯವರ ಪುತ್ರ ಶ್ರೀಧರ್ ಹೇಳಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ನಿನ್ನೆ 9 ಸಾವಿರಕ್ಕೂ ಅಧಿಕ ವೋಟರ್ ಐಡಿಗಳು ಮಂಜುಳಾ ನಂಜಮರಿಯವರೆದ್ದನ್ನಲಾದ ಅಪಾರ್ಟ್ ಮೆಂಟ್ ಒಂದರಲ್ಲಿ ಪತ್ತೆಯಾಗಿತ್ತು. ಈ ಘಟನೆಯ ನಂತರ ಕಾಂಗ್ರೆಸ್ ಹಾಗು ಬಿಜೆಪಿ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದೆ.

“ಆಘಾತಕಾರಿ ಘಟನೆ. ಕಾಂಗ್ರೆಸ್ ಜನಬೆಂಬಲವನ್ನು ಕಳೆದುಕೊಳ್ಳುತ್ತಿದೆ. ಈ ಘಟನೆಯು ಚುನಾವಣೆಯ ಮೇಲಿನ ನಂಬಿಕೆಯನ್ನು ನಾಶ ಪಡಿಸುತ್ತದೆ. ಬಿಜೆಪಿಗೂ ಮಂಜುಳಾಗೂ ಯಾವುದೇ ಸಂಬಂಧವಿಲ್ಲ” ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದರು.

ಆದರೆ ಸಚಿವರ ಈ ಹೇಳಿಕೆಯನ್ನು ನಿರಾಕರಿಸಿರುವ ಶ್ರೀಧರ್, “ಜಾವಡೇಕರ್ ಯಾಕೆ ಸುಳ್ಳು ಹೇಳಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ಅವರಿಗೆ ನನ್ನ ತಾಯಿಯ ಬಗ್ಗೆ ಯಾವುದೇ ಮಾಹಿತಿಯಿಲ್ಲ. ನಾನು, ರಾಕೇಶ್ ಹಾಗು ತಾಯಿ ಬಿಜೆಪಿಯ ಕಾರ್ಯಕರ್ತರು" ಎಂದಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News