ರಾಜ್ಯ ವಿಧಾನಸಭಾ ಚುನಾವಣೆ: 56 ಶೇ. ಮತದಾನ
Update: 2018-05-12 16:43 IST
ಬೆಂಗಳೂರು, ಮೇ12: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮಧ್ಯಾಹ್ನ 3 ಗಂಟೆಯವರೆಗೆ 56 ಶೇ. ಮತದಾನವಾಗಿದೆ. ರಾಜ್ಯದ 222 ಕ್ಷೇತ್ರಗಳಿಗೆ ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭಗೊಂಡಿತ್ತು.
ರಾಜ್ಯದ ಕೆಲವು ಪ್ರದೇಶಗಳಿಗೆ ಮತಯಂತ್ರಗಳು ಕೈಕೊಟ್ಟ ಘಟನೆಗಳು ನಡೆದಿದ್ದು, ಕೆಲವೆಡೆ ಮತದಾನ ವಿಳಂಬವಾಯಿತು.
ಹಲವೆಡೆ ಮತಯಂತ್ರಗಳು ಕೈಕೊಟ್ಟ ಪರಿಣಾಮ ಮತದಾನ ತಡವಾಯಿತು. ಇನ್ನು ಹಲವು ಮತಗಟ್ಟೆಗಳಲ್ಲಿ ವಿದ್ಯುತ್ ಕೈ ಕೊಟ್ಟ ಕಾರಣ ಚುನಾವಣಾ ಸಿಬ್ಬಂದಿ ಗೊಂದಲಕ್ಕೀಡಾದರು. ಹಂಪಿ ನಗರದಲ್ಲಿ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ.