×
Ad

ಹಂಪಿನಗರ ಮತದಾನ ಕೇಂದ್ರದ ಹೊರಗೆ ಕಾಂಗ್ರೆಸ್ - ಬಿಜೆಪಿ ಕಾರ್ಯಕರ್ತರ ಘರ್ಷಣೆ

Update: 2018-05-12 17:05 IST
ಚಿತ್ರ ಕೃಪೆ: ANI

ಬೆಂಗಳೂರು,ಮೇ.12 :  ಹಂಪಿನಗರ ಮತದಾನ ಕೇಂದ್ರವೊಂದರ ಹೊರಗೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ  ಘರ್ಷಣೆ  ನಡೆದ ಬಗ್ಗೆ ವರದಿಯಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಾರ್ಪೊರೇಟರ್ ಒಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆಂದು ಹೇಳಲಾಗಿದ್ದು ಈ ಘಟನೆಯ ಬೆನ್ನಿಗೇ ಘರ್ಷಣೆ ನಡೆದಿದೆ.

"ನಮ್ಮ ಕಾರ್ಪೊರೇಟರ್ ಆನಂದ್ ಮೇಲೆ ಹಲ್ಲೆ ನಡೆದಿದೆ. ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ,'' ಎಂದು ವಿಜಯನಗರ ಬಿಜೆಪಿ ಅಭ್ಯರ್ಥಿ ರವೀಂದ್ರ ಆರೋಪಿಸಿದ್ದಾರೆ. ಮತದಾನ ಕೇಂದ್ರದಿಂದ 100 ಮೀಟರ್ ವ್ಯಾಪ್ತಿ ಪ್ರದೇಶದಲ್ಲಿ ಈ ಘರ್ಷಣೆ ಸಂಭವಿಸಿದ್ದು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ಮತದಾನ ಕೇಂದ್ರ ಸೂಕ್ಷ್ಮ ಪ್ರದೇಶದಲ್ಲಿದ್ದು  ಘಟನೆಯ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಲಾಗುವುದು ಎಮದು ಬೆಂಗಳೂರು ಡಿಸಿಪಿ ರವಿ ಚನ್ನನ್ನವರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News