ಚುನಾವಣಾ ರಾಯಬಾರಿ ರಾಹುಲ್ ದ್ರಾವಿಡ್ ಮತದಾನ
Update: 2018-05-12 18:26 IST
ಬೆಂಗಳೂರು, ಮೇ 12: ಕರ್ನಾಟಕ ಚುನಾವಣಾ ಆಯೋಗದ ರಾಯಬಾರಿಯಾಗಿ ಆಯ್ಕೆಯಾಗಿದ್ದ ಕ್ರಿಕೆಟ್ ಆಟಗಾರ ರಾಹುಲ್ ದ್ರಾವಿಡ್ ನಗರದ ಸಿ.ವಿ.ರಾಮನ್‌ನಗರದಲ್ಲಿ ಮತಚಲಾಯಿಸಿದರು.
ಶನಿವಾರ 11ಗಂಟೆ ವೇಳೆಗೆ ಕ್ರಿಕೆಟ್‌ಪಟು ರಾಹುಲ್‌ದ್ರಾವಿಡ್ ಕುಟುಂಬ ಸಮೇತವಾಗಿ ಆಗಮಿಸಿ ಮತದಾನ ಮಾಡಿದರು. ಈ ವೇಳೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ಉಳಿವಿಗೆ ಪ್ರತಿಯೊಬ್ಬರು ಮತದಾನ ಮಾಡಬೇಕು. ಆ ಮೂಲಕ ಉತ್ತಮ ಸರಕಾರವನ್ನು ರಚಿಸಿಕೊಳ್ಳುವುದು ನಮ್ಮೆಲ್ಲರ ಹೊಣೆಯೆಂದು ತಿಳಿಸಿದರು.
ಅನಿಲ್ ಕುಂಬ್ಳೆ ಮತದಾನ:
ಹಿರಿಯ ಕ್ರಿಕೆಟ್‌ಪಟು ಅನಿಲ್‌ಕುಂಬ್ಳೆ ಕುಟುಂಬ ಸಮೇತವಾಗಿ ಆಗಮಿಸಿ ಮಾತದಾನ ಮಾಡಿ, ಪ್ರಜಾಪ್ರಭುತ್ವದಲ್ಲಿ ಮತದಾನ ಎನ್ನುವುದು ಸಂತಸದ ದಿನವಾಗಿದೆ. ಮತದಾನದಲ್ಲಿ ಎಲ್ಲರು ಪಾಲ್ಗೊಳ್ಳುವ ಮೂಲಕ ಪ್ರಜಾಪ್ರಭುತ್ವದ ಯಶಸ್ವಿಗೆ ಕೈ ಜೋಡಿಸೋಣವೆಂದರು.