ವಿಧಾನಸಭಾ ಚುನಾವಣೆ: ಮತದಾನ ಮಾಡಿ ಸಂಭ್ರಮಿಸಿದ ಸಿನಿ ತಾರೆಯರು

Update: 2018-05-12 14:58 GMT

ಬೆಂಗಳೂರು, ಮೇ 12: ವಿಧಾನಸಭಾ ಚುನಾವಣಾಯಲ್ಲಿ ಬಹುತೇಕ ಮತದಾರರು ಬೆಳಗ್ಗೆಯೆ ಮತಗಟ್ಟೆಗಳಿಗೆ ಬಂದು ಮತದಾನ ಮಾಡುವ ಮೂಲಕ ಮತದಾರರಿಗೆ ಪ್ರೇರಣೆಯಾದರು.

ನಟ ಶಿವರಾಜ್‌ಕುಮಾರ್ ತಮ್ಮ ಪತ್ನಿ ಗೀತಾ ಶಿವರಾಜ್‌ಕುಮಾರ್ ಹೆಬ್ಬಾಳ ಕ್ಷೇತ್ರದಲ್ಲಿ, ಪುನಿತ್‌ರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಸದಾಶಿವ ನಗರದಲ್ಲಿ, ನಟ ಸುದೀಪ್ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಮಾಡಿ, ಕ್ಷೇತ್ರದ ಜನತೆಗೆ ಮತದಾನ ಮಾಡುವಂತೆ ಸಲಹೆ ನೀಡಿದರು.

ಇನ್ನುಳಿದಂತೆ ಹಿರಿಯ ನಟರಾದ ದೇವರಾಜ್, ರಮೇಶ್ ಅರವಿಂದ್, ಉಪೇಂದ್ರ, ಸೃಜನ್‌ಲೋಕೇಶ್, ನಟ ಪ್ರೇಮ್, ರವಿಶಂಕರ್, ನಟಿ ರಕ್ಷಿತಾ, ರಾಧಿಕಾ, ರಾಧಿಕಾ ಚೇತನ್, ನಿರ್ದೇಶಕ ಬಿ.ಸುರೇಶ್, ಪ್ರಜ್ವಲ್ ದೇವರಾಜ್ ಸೇರಿದಂತೆ ಮತ್ತಿತರ ನಟರು ತಮ್ಮ ಸ್ವ ಕ್ಷೇತ್ರಗಳಲ್ಲಿ ಮತದಾನ ಮಾಡಿ ಸಂಭ್ರಮಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News