ರಾಜ್ಯಸಭೆಯ ಪ್ರಥಮ ಅಧಿವೇಶನ

Update: 2018-05-12 18:37 GMT

1643: ಚಿಲಿಯ ಸ್ಯಾಂಟಿಯಾಗೊದಲ್ಲಿ ಸಂಭವಿಸಿದ ಪ್ರಬಲ ಭೂಕಂಪಕ್ಕೆ ಆ ದೇಶದ ಮೂರರಲ್ಲಿ ಒಂದು ಭಾಗದಷ್ಟು ಜನ ಸಾವನ್ನಪ್ಪಿದ ವರದಿಯಾಗಿದೆ.

1846: ಎರಡು ತಿಂಗಳ ಕಾಲ ನಡೆದ ಸಣ್ಣಪುಟ್ಟ ಸಂಘರ್ಷದ ನಂತರ ಅಮೆರಿಕ ಮೆಕ್ಸಿಕೊದ ವಿರುದ್ಧ ಯುದ್ಧ ಘೋಷಿಸಿತು.

1861: ‘ದಿ ಗ್ರೇಟ್ ಕೊಮೆಟ್ 1861’ ಹೆಸರಿನ ಧೂಮಕೇತುವೊಂದನ್ನು ಆಸ್ಟ್ರೇಲಿಯದ ನ್ಯೂ ಸೌತ್ ವೇಲ್ಸ್‌ನ ಜಾನ್ ಟೆಬಟ್ ಎಂಬವರು ಅನ್ವೇಷಿಸಿದರು.

1943: ವಿಶ್ವ ಎರಡನೇ ಮಹಾಯುದ್ಧದಲ್ಲಿ ಆಫ್ರಿಕಾದಲ್ಲಿದ್ದ ಜರ್ಮನ್ ಹಾಗೂ ಇಟಾಲಿಯನ್ ಪಡೆಗಳು ಮಿತ್ರರಾಷ್ಟ್ರಗಳ ಒಕ್ಕೂಟಕ್ಕೆ ಶರಣಾದವು.

1952: ಹೊಸದಾಗಿ ರಚನೆಯಾದ ‘ಕೌನ್ಸಿಲ್ ಆಫ್ ಸ್ಟೇಟ್ಸ್’ ಇಂದು ತನ್ನ ಪ್ರಥಮ ಸಭೆಯನ್ನು ನಡೆಸಿತು. ಸಂಸತ್ತಿನ ಈ ‘ದ್ವಿತೀಯ ಸದನ’ವನ್ನು 1954, ಆಗಸ್ಟ್ 23ರಂದು ರಾಜ್ಯಸಭೆ ಎಂದು ನಾಮಕರಣ ಮಾಡಲಾಯಿತು. ರಾಜ್ಯಸಭೆಯ ಪರಿಕಲ್ಪನೆಯು 1919ರ ಮಾಂಟೆಗೊ ಚೆಮ್ಸ್‌ಫರ್ಡ್ ವರದಿಯು ಮುನ್ನೆಲೆಗೆ ಬಂದಾಗ ಆರಂಭವಾಯಿತು. ಇಂದು ರಾಜ್ಯಸಭೆಯು ಭಾರತದ ಸಂಸತ್ತಿನ ಪ್ರಮುಖ ಭಾಗವಾಗಿದೆ.ಲೋಕಸಭೆಯೊಂದಿಗೆ ರಾಷ್ಟ್ರದ ಹಲವು ಪ್ರಮುಖ ವಿಷಯಗಳ ಕುರಿತು ಈ ಸದನವು ಚರ್ಚೆ ನಡೆಸುತ್ತದೆ.

1965: ಪಶ್ಚಿಮ ಜರ್ಮನಿಯು ಇಸ್ರೇಲ್ ಜೊತೆಗೆ ರಾಜತಾಂತ್ರಿಕ ಸಂಬಂಧಗಳನ್ನು ಆರಂಭಿಸಿದ್ದರಿಂದ ಆಕ್ರೋಶಗೊಂಡು ಹಲವು ಅರಬ್ ದೇಶಗಳು ಪ.ಜರ್ಮನಿ ಜೊತೆಗಿನ ಸಂಬಂಧಗಳನ್ನು ಕಡಿದುಕೊಂಡವು.

1993: ದ.ಆಫ್ರಿಕಾದ ಸೆಕ್ಯುಂಡಾ ಎಂಬಲ್ಲಿ ಕಲ್ಲಿದ್ದಲು ಗಣಿಯೊಂದರಲ್ಲಿ ಮಿಥೇನ್ ಅನಿಲ ಸ್ಫೋಟ ಸಂಭವಿಸಿ 50 ಜನ ಮೃತಪಟ್ಟರು.

2012: ಚೀನಾದ ಹ್ಯುನಾನ್ ಪ್ರಾಂತದಲ್ಲಿ ಧಾರಾಕಾರ ಮಳೆಗೆ ಸುಮಾರು 3,500 ಮನೆಗಳು ನಾಶವಾದವು. ಅಲ್ಲದೆ 28,000 ಜನರು ಸ್ಥಳಾಂತರಗೊಂಡರು.

2001: ಭಾರತದ ಖ್ಯಾತ ಇಂಗ್ಲಿಷ್ ಲೇಖಕ ಆರ್.ಕೆ. ನಾರಾಯಣ್ ನಿಧನ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಈ ದಿನ
ಈ ದಿನ