ಅವಕಾಶ ಕೊಟ್ಟರೆ ಬಹುಮತ ಸಾಬೀತು ಮಾಡುತ್ತೇವೆ: ಬಿ.ಎಸ್.ಯಡಿಯೂರಪ್ಪ
Update: 2018-05-15 20:35 IST
ಬೆಂಗಳೂರು, ಮೇ 15: ರಾಜ್ಯಪಾಲರು ಅವಕಾಶ ಕೊಟ್ಟರೆ ನಾವು(ಬಿಜೆಪಿ) ಬಹುಮತ ಸಾಬೀತುಪಡಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ಫಲಿತಾಂಶ ಪ್ರಕಟವಾದ ಬೆನ್ನಲ್ಲೆ ರಾಜ್ಯಪಾಲರನ್ನು ಭೇಟಿ ಮಾಡಿ ಸರಕಾರ ರಚನೆಗೆ ಹಕ್ಕು ಮಂಡಿಸಿದ ಬಳಿಕ ಸುದ್ಧಿಗಾರರೊಂದಿಗೆ ಜತೆ ಮಾತನಾಡಿದ ಅವರು, ಅವಕಾಶ ಕೊಟ್ಟರೆ ಬಹುಮತ ಸಾಬೀತು ಪಡಿಸುತ್ತೇವೆಂದು ರಾಜ್ಯಪಾಲರಿಗೆ ತಿಳಿಸಿದ್ದೇವೆ ಎಂದು ಹೇಳಿದರು.
ಜನಾದೇಶಕ್ಕೆ ವಿರುದ್ಧವಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಹೊಲಸು ರಾಜಕೀಯ. ಇದನ್ನು ನಾವು ಖಂಡಿಸುತ್ತೇವೆ. ಕಾಂಗ್ರೆಸ್ ವಿರೋಧಿ ಮತಗಳು ನಿರ್ಣಾಯಕವಾಗಿ ಜೆಡಿಎಸ್‌ಗೆ ಹೋಗಿವೆ. ಜನರ ಆರ್ಶೀವಾದದಿಂದ ಬಿಜೆಪಿ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆಂದು ತಿಳಿಸಿದರು.