ಕೋಲ್ಕತಾ ನೈಟ್ ರೈಡರ್ಸ್‌ಗೆ ಜಯ

Update: 2018-05-19 18:30 GMT

  ಹೈದರಾಬಾದ್, ಮೇ 19: ಐಪಿಎಲ್ ಟ್ವೆಂಟಿ-20 ಟೂರ್ನಿಯ 54ನೇ ಪಂದ್ಯದಲ್ಲಿ ಸನ್ ರೈಸರ್ಸ್‌ ಹೈದರಾಬಾದ್ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್‌ ತಂಡ 5 ವಿಕೆಟ್‌ಗಳ ಅಂತರದಲ್ಲಿ ಜಯ ಗಳಿಸಿದೆ.
 ರಾಜೀವ್ ಗಾಂಧಿ ಅಂತರ್‌ರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 173 ರನ್‌ಗಳ ಸವಾಲನ್ನು ಪಡೆದ ಕೋಲ್ಕತಾ ತಂಡ ಇನ್ನೂ 2 ಎಸೆತಗಳು ಬಾಕಿ ಇರುವಾಗಲೇ 5 ವಿಕೆಟ್ ನಷ್ಟದಲ್ಲಿ ಗೆಲುವಿಗೆ ಅಗತ್ಯದ ರನ್ ಸೇರಿಸಿತು.
 ನಾಯಕ ದಿನೇಶ್ ಕಾರ್ತಿಕ್ ಅಜೇಯ 26 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
  ಕ್ರಿಸ್ ಲಿನ್ 55ರನ್, ಸುನೀಲ್ ನರೇನ್ 29ರನ್, ರಾಬಿನ್ ಉತ್ತಪ್ಪ 45ರನ್, ರಸೆಲ್ 4ರನ್ , ನಿತೀಶ್ ರಾಣಾ 7 ರನ್ ಗಳಿಸಿದರು.
  ಸನ್ ರೈಸರ್ಸ್‌ ಹೈದರಾಬಾದ್ 172/9 : ಸನ್‌ರೈಸರ್ಸ್‌ ಹೈದರಾಬಾದ್ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 172 ರನ್ ಗಳಿಸಿತ್ತು.
 ಪ್ರಸಿದ್ಧ್ ಕೃಷ್ಣ (30ಕ್ಕೆ 4) ಪ್ರಹಾರವನ್ನು ಸಮರ್ಥವಾಗಿ ಎದುರಿಸಿದ ಆರಂಭಿಕ ದಾಂಡಿಗ ಶಿಖರ್ ಧವನ್ ಅರ್ಧಶತಕ ದಾಖಲಿಸಿದರು.
 ಧವನ್ 39 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 50 ರನ್ ಗಳಿಸಿದರು.
ವಿಕೆಟ್ ಕೀಪರ್ ಶ್ರೀವತ್ಸ ಗೋಸ್ವಾಮಿ (35), ನಾಯಕ ಕೇನ್ ವಿಲಿಯಮ್ಸನ್(36), ಮನೀಷ್ ಪಾಂಡೆ (25), ಶಾಕೀಬ್ ಅಲ್ ಹಸನ್(10) ಎರಡಂಕೆಯ ಸ್ಕೋರ್ ದಾಖಲಿಸಿದರು.
ಸಂಕ್ಷಿಪ್ತ ಸ್ಕೋರ್ ವಿವರ
ಸನ್‌ರೈಸರ್ಸ್‌ ಹೈದರಾಬಾದ್ 20 ಓವರ್‌ಗಳಲ್ಲಿ 172/9(ಧವನ್ 50, ವಿಲಿಯಮ್ಸನ್ 36, ಗೋಸ್ವಾಮಿ 35; ಪ್ರಸಿದ್ಧ್ ಕೃಷ್ಣ 30ಕ್ಕೆ 4).

ಕೋಲ್ಕತಾ ನೈಟ್ ರೈಡರ್ಸ್ 19.4 ಓವರ್ ಗಳಲ್ಲಿ 173/5( ಲಿನ್ 55, ಉತ್ತಪ್ಪ 45; ಕೌಲ್ 26ಕ್ಕೆ 2, ಬ್ರಾಥ್ ವೈಟ್ 21ಕ್ಕೆ 2) 
  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News