ಸ್ವಾಮಿ ಪೊನ್ನಾಚಿಗೆ ಛಂದ ಪುಸ್ತಕ ಬಹುಮಾನ
Update: 2018-05-20 19:58 IST
ಬೆಂಗಳೂರು, ಮೇ 20: ಪ್ರಸಕ್ತ ಸಾಲಿನ ಛಂದ ಪುಸ್ತಕ ಬಹುಮಾನವು ಕತೆಗಾರ ಸ್ವಾಮಿ ಪೊನ್ನಾಚಿ ರವರ ಕತಾ ಸಂಕಲನದ ಹಸ್ತ ಪ್ರತಿಗೆ ಲಭಿಸಿದೆ.
ಕತೆಗಾರರಾದ ಸ್ವಾಮಿ ಪೊನ್ನಾಚಿರವರು ಕೊಳ್ಳೆಗಾಲದವರಾಗಿದ್ದು, ಯಳಂದೂರಿನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಕತಾ ಸ್ಪರ್ಧೆಗೆ 60ಕ್ಕೂ ಹೆಚ್ಚು ಹಸ್ತಪ್ರತಿಗಳು ಬಂದಿದ್ದವು. ಅವುಗಳ ಮೊದಲ ಸುತ್ತಿನ ಆಯ್ಕೆಯನ್ನು ಬರಹಗಾರರಾದ ಶ್ರೀಕಾಂತ ಉಡುಪ, ಕರ್ಕಿ ಕೃಷ್ಣಮೂರ್ತಿ ಮತ್ತು ವಸುಧೇಂದ್ರ ಮಾಡಿದ್ದರು. ಅಂತಿಮ ಸುತ್ತಿನಲ್ಲಿ ಹಿರಿಯ ಕತೆಗಾರ ಎಂ.ಎಸ್.ಶ್ರೀರಾಮ್‌ರವರು ಸ್ವಾಮಿ ಪೊನ್ನಾಚಿರವರ ಕತೆಗಳ ಹಸ್ತಪ್ರತಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ.
ಛಂದ ಪುಸ್ತಕ ಬಹುಮಾನಕ್ಕೆ ಆಯ್ಕೆಯಾದ ಕತೆಗಳ ಹಸ್ತಪ್ರತಿಯನ್ನು ಪ್ರಕಟಿಸಿ 30 ಸಾವಿರ ಬಹುಮಾನ ನೀಡಲಿದೆ. ಜೂ.10ರಂದು ಬೆಂಗಳೂರಿನಲ್ಲಿ ಪುಸ್ತಕ ಬಿಡುಗಡೆ ಸಭಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಛಂದ ಪುಸ್ತಕ ಪ್ರಕಾಶನವು ಪ್ರಕಟನೆಯಲ್ಲಿ ತಿಳಿಸಿದೆ.