ಭಾರತೀಯ ನೌಕಾ ಪಡೆಯ ಮಹಿಳೆಯರ ವಿಶ್ವಪರ್ಯಟನೆ ಪೂರ್ಣ

Update: 2018-05-21 17:20 GMT

ಪಣಜಿ, ಜೂ. 21: ನೌಕಾ ಹಡಗು ಎಎನ್‌ಎಸ್‌ವಿ ತಾರಿಣಿ ಮೂಲಕ 8 ತಿಂಗಳಲ್ಲಿ ವಿಶ್ವ ಪರ್ಯಟನೆ ಪೂರ್ಣಗೊಳಿಸಿ ಸೋಮವಾರ ಪಣಜಿಗೆ ಆಗಮಿಸಿದ ನೌಕಾ ಪಡೆಯ 6 ಮಂದಿ ಮಹಿಳಾ ಸದಸ್ಯರನ್ನು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ನೌಕಾ ಪಡೆಯ ವರಿಷ್ಠ ಅಡ್ಮಿರಲ್ ಸುನಿಲ್ ಲಾಂಬ್ ಅಭಿನಂದಿಸಿದರು.

 ‘ನಾವಿಕ ಸಾಗರ ಪರಿಕ್ರಮ’ ಹೆಸರಿನ ಈ ಪರ್ಯಟನೆಗೆ ಕಳೆದ ವರ್ಷ ಸೆಪ್ಟಂಬರ್ 10ರಂದು ಐಎನ್‌ಎಸ್ ಮಾಂಡೋವಿ ಬೋಟ್ ಪೂಲ್‌ನಿಂದ ಚಾಲನೆ ನೀಡಲಾಗಿತ್ತು. ಲೆಫ್ಟಿನೆಂಟ್ ಕಮಾಂಡರ್ ವರ್ತಿಕಾ ಜೋಷಿ ನೇತೃತ್ವದಲ್ಲಿ ತಂಡ ವಿಶ್ವ ಪರ್ಯಟನೆ ನಡೆಸಿತು. ಈ ತಂಡದಲ್ಲಿ ಲೆಫ್ಟಿನೆಂಟ್ ಕಮಾಂಡರ್‌ಗಳಾದ ಪ್ರತಿಬಾ ಜಮ್ವಾಲ್, ಸ್ವಾತಿ ಪಿ.; ಲೆಫ್ಟಿನೆಂಟ್‌ಗಳಾದ ಐಶ್ವರ್ಯಾ ಬೊಡ್ಡಪಟಿ, ಎಸ್. ವಿಜಯಾ ದೇವಿ, ಪಾಯಲ್ ಗುಪ್ತಾ ಹಾಗೂ ಇತರ ಸದಸ್ಯರಿದ್ದರು. ಕಳೆದ ವರ್ಷ ಫೆಬ್ರವರಿ 18ರಂದು ಭಾರತದ ನೌಕಾ ಪಡೆಗೆ ನಿಯೋಜಿಸಲಾಗಿದ್ದ 55 ಅಡಿಯ ಎತ್ತರದ ನೌಕಾಯಾನದ ಹಡಗು ಐಎನ್‌ಎಸ್ ತಾರಿಣಿ ಇಂದು ತನ್ನ ಪರ್ಯಟನೆ ಪೂರ್ಣಗೊಳಿಸಿದೆ. ಭಾರದತದಲ್ಲಿ ಮಹಿಳೆಯರೇ ಒಳಗೊಂಡ ತಂಡ ವಿಶ್ವ ಪರ್ಯಟನೆ ನಡೆಸುತ್ತಿರುವುದು ಇದೆ ಮೊದಲು ಎಂದು ನೌಕಾ ಪಡೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News