×
Ad

ಬೆಂಗಳೂರು: ಮೇ 23 ರಿಂದ ಜೂ.9 ರವರೆಗೆ ಅತಿಸಾರ ನಿಯಂತ್ರಣ ಅಭಿಯಾನ

Update: 2018-05-24 19:28 IST

ಬೆಂಗಳೂರು, ಮೇ 24: ನಗರ ವ್ಯಾಪ್ತಿಯಲ್ಲಿ ಮೇ 23 ರಿಂದ ಜೂ.9 ರವರೆಗೆ ಸಶಕ್ತ ಅತಿಸಾರ ನಿಯಂತ್ರಣ ಅಭಿಯಾನವನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯೋಜಿಸಿದೆ.

ಬೆಂಗಳುರು ನಗರ ವ್ಯಾಪ್ತಿಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿ ಮತ್ತು ಖಾಸಗಿ ಆಸ್ಪತ್ರೆಗಳ ಸಹಭಾಗಿತ್ವದೊಂದಿಗೆ ಮೇ 23 ರಿಂದ ಜೂ.9 ರವರೆಗೆ 5 ವರ್ಷ ಒಳಗಿನ ಅತಿಸಾರ ಭೇದಿಯಿಂದ ಬಳಲುತ್ತಿರುವ ಮಕ್ಕಳಿಗೆ ಓಆರ್‌ಎಸ್ ಮತ್ತು ಝಿಂಕ್ ಮಾತ್ರೆ ನೀಡುವ ಅಭಿಯಾನ ಆರಂಭಿಸಲಾಗಿದೆ.

ಮೊದಲು ಆರು ತಿಂಗಳು ಮಕ್ಕಳಿಗೆ ಕಡ್ಡಾಯವಾಗಿ ಎದೆ ಹಾಲು ಕೊಡುವುದು, ಅತಿಸಾರ ತಡೆಗಟ್ಟಲು ಮೀಸಲ್ಸ್ ಮತ್ತು ರೋಟಾ ವೈರಸ್ ಲಸಿಕೆ ನೀಡುವುದು ಹಾಗೂ ಅತಿಸಾರ ಭೇದಿಯ ಸಂದರ್ಭದಲ್ಲಿ ಓಆರ್‌ಎಸ್ ನೀಡುವುದರ ಮೂಲಕ ಮಕ್ಕಳನ್ನು ರಕ್ಷಿಸುವುದು ಅಭಿಯಾನದ ಉದ್ದೇಶವಾಗಿದೆ.

6 ತಿಂಗಳಿಂದ 2 ವರ್ಷ ವರೆಗಿನ ಮಕ್ಕಳಲ್ಲಿ ಕಂಡುಬರುವ ಅತಿಸಾರ ಬೇದಿಗೆ ಎದೆ ಹಾಲಿನ ಜತೆ ಪೂರಕ ಆಹಾರ ಕೊಡುವುದು, ವೈಯಕ್ತಿಕ ಸ್ವಚ್ಛತೆ ಕಾಪಾಡುವುದು ಮತ್ತು ಝಿಂಕ್ ಮಾತ್ರೆಗಳನ್ನು 14 ದಿನಗಳವರೆಗೆ ನೀಡುವುದು ಹಾಗೂ ವಿಟಮಿನ್ ‘ಎ’ ನೀಡುವುದು ಹಾಗೂ ಎಲ್ಲ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಓಆರ್‌ಎಸ್ ಮತ್ತು ಝಿಂಕ್ ಕಾರ್ನರ್‌ಗಳನ್ನು ಸ್ಥಾಪಿಸಿ, ಇದರ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News