×
Ad

ರಾಜರಾಜೇಶ್ವರಿ ನಗರ ಮತ್ತು ಜಯನಗರ ಕ್ಷೇತ್ರಗಳ ಚುನಾವಣೆ ಹಿನ್ನೆಲೆ : ಪರೀಕ್ಷಾ ವೇಳಾಪಟ್ಟಿ ಬದಲು

Update: 2018-05-25 18:35 IST

ಬೆಂಗಳೂರು, ಮೇ 25: ರಾಜ್ಯ ವಿಧಾನಸಭೆ ರಾಜರಾಜೇಶ್ವರಿ ನಗರ ಮತ್ತು ಜಯನಗರ ಕ್ಷೇತ್ರಗಳ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ.

ಮೇ 28ರಂದು ನಡೆಯಬೇಕಿದ್ದ ಬಿಎ, ಬಿಎಸ್ಸಿ, ಬಿಕಾಂ, ಬಿಎಚ್‌ಎಮ್, ಬಿಎಸ್‌ಡಬ್ಲೂ, ಬಿಸಿಎ, ಬಿಎಸ್ಸಿ(ಎಫ್‌ಎಡಿ), ಬಿಎಸ್ಸಿ(ಐಡಿಡಿ), ಬಿವಿಎ, ಬಿಕಾಂ(ವೊಕೇಷನಲ್), ಬಿ.ವೋಕ್(ಆರ್‌ಎಂ), ಬಿ.ವೋಕ್(ಐಟಿ), ಬಿ.ವೋಕ್(ಫುಡ್ ಪ್ರೋಸಸಿಂಗ್ ಅಂಡ್ ನೂಟ್ರಿಷಿಯಲ್) ಪದವಿಗಳ 2ನೇ ಸೆಮಿಸ್ಟರ್ ಹಾಗೂ ಬಿ.ವೋಕ್(ಎಂಎಲ್‌ಟಿ)ಯ 4ನೇ ಸೆಮಿಸ್ಟರ್ ಪರೀಕ್ಷೆಗಳು ಜೂ.13ರಂದು ಬೆಳಗ್ಗೆ 9.30ರಿಂದ 12.30ಗಂಟೆವರೆಗೆ ನಡೆಯಲಿವೆ.

ಬಿಎ, ಬಿಎಸ್ಸಿ, ಬಿಕಾಂ, ಬಿಬಿಎ, ಬಿಎಚ್‌ಎಮ್, ಬಿವಿಎ, ಬಿಎಸ್‌ಡಬ್ಲೂ, ಬಿಎಸ್ಸಿ(ಎಫ್‌ಎಡಿ), ಬಿ.ವೋಕ್(ಡಾಟಾ ಅಂಡ್ ವೆಬ್ ಅನಾಲಿಸಿಸ್) ಪದವಿಗಳ 6ನೇ ಸೆಮಿಸ್ಟರ್ ಪರೀಕ್ಷೆಗಳನ್ನು ಜೂ. 7ರಂದು ಮಧ್ಯಾಹ್ನ 2ರಿಂದ 5ಗಂಟೆವರೆಗೆ ನಡೆಸಲಾಗುತ್ತದೆ. ಇನ್ನು, ಜೂ. 11ರಂದು ನಡೆಯಬೇಕಿದ್ದ ಬಿಎ, ಬಿಎಸ್ಸಿ 2ನೇ ಸೆಮಿಸ್ಟರ್ ಪರೀಕ್ಷೆಗಳನ್ನು ಜೂ. 14ರಂದು ಬೆಳಗ್ಗೆ 9.30ರಿಂದ 12.30ಗಂಟೆವರೆಗೆ ನಡೆಸಲಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News