ಶಾಲೆ ಆರಂಭದಂದೇ ಪುಸ್ತಕ ವಿತರಣೆ

Update: 2018-05-27 11:40 GMT

ಬೆಂಗಳೂರು, ಮೇ 27: ಕಳೆದ ಬಾರಿ ಶಾಲೆಗಳಿಗೆ ಪಠ್ಯಪುಸ್ತಕ ತಡವಾಗಿ ತಲುಪಿದ ಹಿನ್ನೆಲೆಯಲ್ಲಿ ಪೋಷಕರು ಟೀಕೆಗಳನ್ನು ಎದುರಿಸಬೇಕಾಗಿತ್ತು. ಇದರಿಂದ ಎಚ್ಚೆತ್ತು ಕೊಂಡಿರುವ ಕರ್ನಾಟಕ ಪಠ್ಯಪುಸ್ತಕ ವ್ಯಾಪಾರಿಗಳ ಸಂಘ ಈ ಬಾರಿ ಶಾಲೆ ಪ್ರಾರಂಭವಾದ ದಿನವೇ ಶಾಲೆಗಳಿಗೆ ಪುಸ್ತಕಗಳನ್ನು ತಲುಪಿಸಲು ನಿರ್ಧರಿಸಿದೆ.

2018-19ನೆ ಶೈಕ್ಷಣಿಕ ಸಾಲಿನ ಸರಕಾರಿ ಶಾಲೆಗಳು ಮೇ 28ರಿಂದ ಆರಂಭಗೊಳ್ಳಲಿದ್ದು, ನಾಳೆಯೇ ಪುಸ್ತಕಗಳನ್ನು ವಿತರಿಸುವ ಗುರಿ ಹೊಂದಿದ್ದೇವೆ. ಈಗಾಗಲೆ ಶೇ.85ರಿಂದ 90ರಷ್ಟು ಪುಸ್ತಕಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ತಲುಪಿವೆ ಎಂದು ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕ ನರಸಿಂಹಯ್ಯ ತಿಳಿಸಿದ್ದಾರೆ.

ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲಗು, ಮರಾಠಿ ಮತ್ತು ಉರ್ದು ಸೇರಿದಂತೆ ಏಳು ಭಾಷೆಯ 101ಶೀರ್ಷಿಕೆಯ ಪುಸ್ತಕಗಳನ್ನು ಮುದ್ರಿಸಲಾಗಿದೆ. ಕಳೆದ ಬಾರಿ ಪುಸ್ತಕ ಪರಿಷ್ಕರಣೆ ವೇಳೆ ಕಂಡುಬಂದಿದ್ದ ಕಾಗುಣಿತ ದೋಷಗಳನ್ನು ಈ ಬಾರಿ ತಿದ್ದಿಕೊಂಡು ಪುಸ್ತಕಗಳನ್ನು ಮುದ್ರಣ ಮಾಡಲಾಗಿದೆ. ಒತ್ತಕ್ಷರಗಳು, ದೀರ್ಘ ಸ್ವರಗಳನ್ನು ಪರಿಷ್ಕರಣೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News