ಮೇ 28 ರಂದು ಗ್ರಾಪಂ ನೌಕರರ ಧರಣಿ

Update: 2018-05-27 15:00 GMT

ಬೆಂಗಳೂರು, ಮೇ 27: ಗ್ರಾಮ ಪಂಚಾಯತ್ ನೌಕರರಿಗೆ ಇಎಫ್‌ಎಮ್‌ಎಸ್ ಮೂಲಕ ವೇತನ ಜಾರಿಗೊಳ್ಳಬೇಕೆಂದು ಒತ್ತಾಯಿಸಿ ಹಾಗೂ ಮೂರು ತಿಂಗಳಿನಿಂದ ವೇತನ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಮೇ 28ರಂದು ಎಲ್ಲ ತಾಲೂಕು ಪಂಚಾಯತ್ ಎದುರು ಪ್ರತಿಭಟನೆ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘದ ಪ್ರಧಾನ ಕಾರ್ಯ ದರ್ಶಿ ರೇಣುಕ್ ಪ್ರಸಾದ್ ತಿಳಿಸಿದ್ದಾರೆ.

ರವಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯತ್ ನೌಕರರಿಗೆ ಇಎಫ್‌ಎಮ್‌ಎಸ್ ಮೂಲಕ ವೇತನ ಪಾವತಿಯನ್ನು ಕಳೆದ ಮಾರ್ಚ್‌ನಲ್ಲೇ ಪಡೆದುಕೊಳ್ಳಲಾಗಿದೆ. ಆದರೆ, ಇದುವರೆಗೂ ಈ ಪೇಮೆಂಟ್ ಆದೇಶ ಜಾರಿಯಾಗಿಲ್ಲ. ಹಾಗೂ ಕಳೆದ ಮೂರು ತಿಂಗಳಿನಿಂದಲೂ ವೇತನ ಪಾವತಿಮಾಡಿಲ್ಲ ಎಂದು ತಿಳಿಸಿದರು.

ವೇತನ ಪಾವತಿಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೂ, ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳ ವಿಳಂಬ ಧೋರಣೆ ಗ್ರಾಮ ಪಂಚಾಯತ್ ನೇಮಕಾತಿ ನಡುವಳಿ ಹಾಜರಾತಿ ವೇತನ ಬಟವಾಡೆಯಂತಹ ದಾಖಲೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ಆರ್‌ಡಿಪಿಆರ್ ಇಲಾಖೆ ಸ್ಪಷ್ಟಪಡಿಸಿದರು. ಬಹಳಷ್ಟು ವಿಳಂಬವಾಗಿದೆ ಎಂದು ಆರೋಪಿಸಿದರು.

ಈ ಎಲ್ಲ ವಿಳಂಬ ಘೋರಣೆಯನ್ನು ಖಂಡಿಸಿ ಮೂರು ತಿಂಗಳಿನಿಂದ ಬಾಕಿ ಇರುವ ವೇತನ ಪಾವತಿ ಮಾಡಬೇಕೆಂದು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News