×
Ad

ವಿದ್ಯಾರ್ಥಿಗಳಿಗೆ ಸಾಮಾಜಿಕ ಜವಾಬ್ದಾರಿ ತಿಳಿಸಲು ಮುಂದಾಗಿ: ರಾಜ್ಯ ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್

Update: 2018-05-28 21:30 IST

ಬೆಂಗಳೂರು, ಮೇ 28: ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕಲಿಸುವುದರ ಜೊತೆಗೆ ಸಾಮಾಜಿಕ ಜವಾಬ್ದಾರಿಗಳನ್ನು ತಿಳಿಸಲು ಮುಂದಾಗಬೇಕೆಂದು ರಾಜ್ಯ ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಕೆ.ಮಂಜುನಾಥ್ ಹೇಳಿದ್ದಾರೆ.

ಸೋಮವಾರ ನಗರದ ಹೆಸರಘಟ್ಟದಲ್ಲಿ ಯೂನಿಯನ್ ಆಪ್ ಜ್ಞಾನವೃಕ್ಷ ಸೋಷಿಯಲ್ ಅಂಡ್ ಎಜುಕೇಷನ್ ಟ್ರಸ್‌ವತಿಯಿಂದ ಏರ್ಪಡಿಸಿದ್ದ ‘ಪ್ರತಿಭಾ ಪುರಸ್ಕಾರ’ ಸಮಾರಂಭದಲ್ಲಿ ಎಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಮಕ್ಕಳನ್ನು ಕೇವಲ ಅಂಕಗಳಿಸುವ ಯಂತ್ರಗಳನ್ನಾಗಿಸದೆ ಸಾಮಾಜಿಕ ಕಳಕಳಿ ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸಬೇಕೆಂದು ಅವರು ಹೇಳಿದರು.

ಬಿಜಿಎಸ್ ಪಿಯು ಕಾಲೇಜಿನ ಪ್ರಾಂಶುಪಾಲ ಸಿ.ಆರ್.ಆನಂದ್ ಕುಮಾರ್ ಮಾತನಾಡಿ, ಕೇವಲ ಉತ್ತಮ ಅಂಕಗಳಿಸುವುದಷ್ಟೆ ವಿದ್ಯಾರ್ಥಿ ಜೀವನದ ಗುರಿಯಾಗಬಾರದು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕೆಂದು ಮಕ್ಕಳಿಗೆ ಕರೆ ನೀಡಿದರು.

ಈ ವೇಳೆ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.80ಕ್ಕೂ ಹೆಚ್ಚು ಅಂಕಗಳಿಸಿದ ಭವ್ಯ ಎಚ್.ಎಸ್, ಚಿತ್ರಶ್ರೀ, ಎಚ್.ಆರ್.ಉಷಾ, ಕುಶಾಲ್, ಶ್ರಾವಣಿ ಎಚ್.ಎ, ದೀಪಕ್‌.ಬಿ., ಲಾವಣ್ಯಎ.ಸಿ, ಚರಣ್‌ಎಚ್.ಆರ್, ಗಂಗನ್ ಆರ್, ಶಶಾಂಕ್, ಸುಜನ್‌ಎಂ, ಲಲಿತ ಮೋಹನ್, ಮನಿಷಾ, ಹರ್ಷಿತಾ, ಮನೋಜ್, ಪಲ್ಲವಿ, ಮಹಾಲಕ್ಷ್ಮಿ, ಮಧುಶ್ರೀ, ಶ್ರೇಯಸ್‌ಗೌಡ, ಶಶಾಂಕ್ ಎಚ್.ಆರ್, ಕೀರ್ತನಾ ಸೇರಿದಂತೆ ಎಸೆಸ್ಸೆಲ್ಸಿ ಕನ್ನಡ ಭಾಷೆಯಲ್ಲಿ 125ಕ್ಕೆ 125 ಮತ್ತು ಹಿಂದಿಯಲ್ಲಿ 100 ಅಂಕ ಗಳಿಸಿದ ಭವ್ಯ ಎಚ್.ಎಸ್. ಮತ್ತು ಶ್ರಾವಣಿ ಹಾಗೂ ‘ಪದ್ಮಾವತಿ ಎನ್.ಮೆಮೋರಿಯಲ್ ಅವಾರ್ಡ್’ ಹಾಗೂ ಸಮಾಜ ವಿಜ್ಞ್ಞಾನದಲ್ಲಿ 100 ಅಂಕಗಳಿಸಿದ ಉಷಾ ಹೆಚ್.ಎನ್.ಗೆ ರಾಮಯ್ಯ ಮೆಮೋರಿಯಲ್ ಅವಾರ್ಡ್ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಜ್ಞಾನವೃಕ್ಷ ಎಜುಕೇಷನ್ ಟ್ರಸ್ಟ್‌ನ ನರೇಂದ್ರ, ಮತ್ತೀಕೆರೆ ಬ್ಲೂಮಿಂಗ್ ಗ್ಲೋರಿಯಸ್ ಶಾಲೆಯ ಕಾರ್ಯದರ್ಶಿ ಧನಲಕ್ಷ್ಮಿ, ಇಂಗ್ಲಿಷ್ ಭಾಷೆ ರಾಜ್ಯ ಸಂಪನ್ಮೂಲ ವ್ಯಕ್ತಿ ಎನ್.ಸುಬ್ರಮಣಿ, ಜ್ಞಾನವೃಕ್ಷ ಟ್ರಸ್ಟ್ ಅಧ್ಯಕ್ಷರಾದ ವೀಣಾ ನರೇಂದ್ರ, ಪರ್ತಕರ್ತ ರಾಮಚಂದ್ರಮೂರ್ತಿ ಚಲ್ಲಹಳ್ಳಿ, ಸಮಾಜಸೇವಕರಾದ ವೆಂಕಟೇಶ್, ಡಾ.ತನುಜ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News