ಡಿಮಿಟ್ರೊವ್‌ಗೆ ವೆರ್ಡಾಸ್ಕೊ ಶಾಕ್

Update: 2018-06-01 18:32 GMT

ಪ್ಯಾರಿಸ್, ಜೂ.1: ಬಲ್ಗೇರಿಯದ ಗ್ರಿಗೊರ್ ಡಿಮಿಟ್ರೊವ್ ಸ್ಪೇನ್‌ನ ಫೆರ್ನಾಂಡೊ ವೆರ್ಡಾಸ್ಕೊ ವಿರುದ್ಧ ಶರಣಾಗಿ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಿಂದ ನಿರ್ಗಮಿಸಿದ್ದಾರೆ. ಇಲ್ಲಿ ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ನ ಮೂರನೇ ಸುತ್ತಿನ ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕದ ಡಿಮಿಟ್ರೊವ್ ವಿರುದ್ಧ ವೆರ್ಡಾಸ್ಕೊ 7-6(7/4), 6-2, 6-4 ಸೆಟ್‌ಗಳಿಂದ ಜಯ ಸಾಧಿಸಿದರು.

ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಎರಡು ಬಾರಿ ಸೆಮಿ ಫೈನಲ್‌ಗೆ ತಲುಪಿರುವ ಡಿಮಿಟ್ರೊವ್ ಫ್ರೆಂಚ್ ಓಪನ್‌ನಲ್ಲಿ 8 ಪ್ರಯತ್ನದಲ್ಲಿ ನಾಲ್ಕನೇ ಸುತ್ತು ತಲುಪಿಲ್ಲ.

34ರ ಹರೆಯದ ವೆರ್ಡಾಸ್ಕೊ ಕ್ವಾರ್ಟರ್ ಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಸಹ ಆಟಗಾರ ರೊಬರ್ಟೊ ಬೌಟಿಸ್ಟಾ ಅಗುಟ್ ಅಥವಾ ಮಾಜಿ ಚಾಂಪಿಯನ್ ನೊವಾಕ್ ಜೊಕೊವಿಕ್ ಸವಾಲನ್ನು ಎದುರಿಸಲಿದ್ದಾರೆ.

ವಿಶ್ವದ ನಂ.35ನೇ ಆಟಗಾರ ವೆರ್ಡಾಸ್ಕೊ ಏಳನೇ ಬಾರಿ ಫ್ರೆಂಚ್ ಓಪನ್‌ನಲ್ಲಿ ನಾಲ್ಕನೇ ಸುತ್ತಿಗೆ ತೇರ್ಗಡೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News