ನಡಾಲ್, ಸಿಲಿಕ್ ನಾಲ್ಕನೇ ಸುತ್ತಿಗೆ ಪ್ರವೇಶ

Update: 2018-06-02 18:40 GMT

ಪ್ಯಾರಿಸ್, ಜೂ.2: ಅಗ್ರ ಶ್ರೇಯಾಂಕದ ಆವೆಮಣ್ಣಿನ ರಾಜ ಖ್ಯಾತಿಯ ರಫೆಲ್ ನಡಾಲ್ ಫ್ರೆಂಚ್ ಓಪನ್‌ನಲ್ಲಿ ಪ್ರಿ-ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.

 ಇಲ್ಲಿ ಶನಿವಾರ ನಡೆದ ಪುರುಷರ ಸಿಂಗಲ್ಸ್‌ನ ಮೂರನೇ ಸುತ್ತಿನ ಪಂದ್ಯದಲ್ಲಿ 10 ಬಾರಿಯ ಫ್ರೆಂಚ್ ಓಪನ್ ಚಾಂಪಿಯನ್ ನಡಾಲ್ ಅವರು ಆತ್ಮೀಯ ಸ್ನೇಹಿತ, ಸ್ಥಳೀಯ ಆಟಗಾರ ರಿಚರ್ಡ್ ಗ್ಯಾಸ್ಕಟ್ ಅವರನ್ನು 6-3, 6-2, 6-2 ಸೆಟ್‌ಗಳಿಂದ ಸುಲಭವಾಗಿ ಮಣಿಸಿದರು. ಇದೀಗ ಕೆಂಪುಮಣ್ಣಿನ ಕೋರ್ಟ್ ನಲ್ಲಿ ಸತತ 30ನೇ ಸೆಟ್‌ನ್ನು ಜಯಿಸಿದ ನಡಾಲ್ ಮುಂದಿನ ಸುತ್ತಿನಲ್ಲಿ 70ನೇ ರ್ಯಾಂಕಿನ 22ರ ಹರೆಯದ ಜರ್ಮನಿ ಆಟಗಾರ ಮ್ಯಾಕ್ಸಿಮಿಲನ್ ಮಾರ್ಟರ್‌ರನ್ನು ಎದುರಿಸಲಿದ್ದಾರೆ.

►ಮರಿನ್ ಸಿಲಿಕ್ ನಾಲ್ಕನೇ ಸುತ್ತಿಗೆ

ಕ್ರೊಯೇಷಿಯದ 3ನೇ ಶ್ರೇಯಾಂಕದ ಆಟಗಾರ ಮರಿನ್ ಸಿಲಿಕ್ ಫ್ರೆಂಚ್ ಓಪನ್‌ನಲ್ಲಿ ನಾಲ್ಕನೇ ಸುತ್ತಿಗೆ ಪ್ರವೇಶಿಸಿದರು. ಶನಿವಾರ ನಡೆದ ಪುರುಷರ ಸಿಂಗಲ್ಸ್‌ನ 3ನೇ ಸುತ್ತಿನ ಹಣಾಹಣಿಯಲ್ಲಿ ಸಿಲಿಕ್ ಅಮೆರಿಕದ ಸ್ಟೀವ್ ಜಾನ್ಸನ್‌ರನ್ನು 6-3, 6-2, 6-4 ನೇರ ಸೆಟ್‌ಗಳಿಂದ ಸದೆ ಬಡಿದರು. ಈ ಗೆಲುವಿನೊಂದಿಗೆ 5ನೇ ಬಾರಿ ಅಂತಿಮ-16ರ ಸುತ್ತು ತಲುಪಿದರು.

ಸಿಲಿಕ್ ಮುಂದಿನ ಸುತ್ತಿನಲ್ಲಿ ಇಟಲಿಯ ಫ್ಯಾಬಿಯೊ ಫೊಗ್ನಿನಿ ಅವರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News