ಬೆಂಗಳೂರು: ಶಕ್ತಿ ಕೇಂದ್ರದಲ್ಲಿ ಡಿಸಿಎಂ ‘ವಾಸ್ತು ಪೂಜೆ’
Update: 2018-06-03 17:15 IST
ಬೆಂಗಳೂರು, ಜೂ. 3: ಮೌಢ್ಯಾಚರಣೆ ನಿಷೇಧ ಕಾಯ್ದೆ ಜಾರಿಗೆ ಆಗ್ರಹಿಸುತ್ತಿರುವ ಮಧ್ಯೆಯೇ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಮ್ಮ ಕುಟುಂಬದ ಸದಸ್ಯರೊಂದಿಗೆ ರವಿವಾರ ವಿಧಾನಸೌಧದಲ್ಲಿ ವಾಸ್ತು ಶಾಸ್ತ್ರ ಪೂಜೆ ಸಲ್ಲಿಸಿದ್ದಾರೆಂದು ಗೊತ್ತಾಗಿದೆ.
ವಿಧಾನಸೌಧ ಮೂರನೆ ಮಹಡಿಯ ಕೊಠಡಿ ಸಂಖ್ಯೆ-327, 328ರಲ್ಲಿ ಪೊಲೀಸ್ ಭದ್ರತೆಯ ನಡುವೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪರಮೇಶ್ವರ್ ಅವರ ಪತ್ನಿ ಕನ್ನಿಕಾ ನೇತೃತ್ವದಲ್ಲಿ ಪುರೋಹಿತರು ಹವನ-ಹೋಮ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಶೇಷ ಪೂಜೆ ಹಿನ್ನೆಲೆಯಲ್ಲಿ ವಿಧಾನಸೌಧಕ್ಕೆ ಯಾರಿಗೂ ಪ್ರವೇಶ ನೀಡದಂತೆ ಪೊಲೀಸರಿಗೆ ಸೂಚಿಸಲಾಗಿತ್ತು. ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ ವಿಧಾನಸೌಧದ ಸಿಎಂ ಕೊಠಡಿಯನ್ನು ವಾಸ್ತು ಬದಲಿಸಿಕೊಂಡಿದ್ದರು.