ಲಂಚಮುಕ್ತ ‘ಜಯನಗರ ಕ್ಷೇತ್ರ’ ನಮ್ಮ ಗುರಿ: ರವಿಕೃಷ್ಣಾರೆಡ್ಡಿ ಪ್ರಣಾಳಿಕೆ ಬಿಡುಗಡೆ

Update: 2018-06-03 11:53 GMT

ಬೆಂಗಳೂರು, ಜೂ.3: ಜಯನಗರ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರವಿಕೃಷ್ಣಾರೆಡ್ಡಿ ತಮ್ಮ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಲಂಚಮುಕ್ತ ಕ್ಷೇತ್ರ ಮಾಡುವುದು ನಮ್ಮ ಗುರಿ ಎಂದು ಘೋಷಣೆ ಮಾಡಿದ್ದಾರೆ.

ಜಯನಗರ ವಿಧಾನಸಭಾ ಕ್ಷೇತ್ರಕ್ಕೆ ಜೂ.11 ರಂದು ಮತದಾನ ನಡೆಯಲಿದೆ. ಅದರ ಅಂಗವಾಗಿ ಇಲ್ಲಿನ ಮಯ್ಯೆಸ್ ವೃತ್ತದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕಾರದ ಶೋಭಾ ಕಿಣಿ, ಡಾ,ಕೆ.ಶಿವರಾಂ, ಆನೆಪ್ಪ ಮತ್ತು ನಂಜುಂಡರಾವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ತಮ್ಮ ಪ್ರಣಾಳಿಕೆಯಲ್ಲಿ ಜಯನಗರ ಕ್ಷೇತ್ರವನ್ನು ಲಂಚಮುಕ್ತ ಮಾಡುವುದು, ಶಿಕ್ಷಣ ಮತ್ತು ಆರೋಗ್ಯಕ್ಕೆ ಒತ್ತು, ಪರಿಸರ ಸ್ನೇಹಿ ಹಾಗು ಕಸಮುಕ್ತ ಕ್ಷೇತ್ರವನ್ನಾಗಿ ಮಾಡಲು ಬದ್ಧರಾಗಿರುವುದಾಗಿ ತಮ್ಮ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದಾರೆ. ಪ್ರಣಾಳಿಕೆಗೆ ಜಯನಗರ ಕ್ಷೇತ್ರದ ಮತದಾರರನ್ನು ಭೇಟಿ ಮಾಡಿ ಅವರ ಸಲಹೆ ಸೂಚನೆಗಳನ್ನು ಪಡೆದು ಹಾಗು ಇಡೀ ಕ್ಷೇತ್ರದ ಪರ್ಯಟನೆ ಮಾಡಿ ತಯಾರಿಸಲಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ, ಆಡಳಿತದಲ್ಲಿ ಜನರ ಸಹಭಾಗಿತ್ವ, ಬೀದಿ ವ್ಯಾಪಾರಿಗಳ ರಕ್ಷಣೆ, ಉತ್ತಮ ವಸತಿ ಸೌಕರ್ಯ, ಸರ್ಕಾರಿ ಭೂಮಿಯನ್ನು ರಕ್ಷಿಸಿ, ಅಲ್ಲಿ ಸಾರ್ವಜನಿಕ ಉದ್ಯಾನವನ ಮತ್ತು ಇತರೆ ಸೌಕರ್ಯಗಳನ್ನು ಒದಗಿಸಲು ಕಾರ್ಯಕ್ರಮ ರೂಪಿಸಲಾಗಿದೆ. ಅಲ್ಲದೆ, ಶಾಸಕರಾಗಿ ಆಯ್ಕೆಯಾದರೆ ಯಾವುದೇ ಆಸ್ತಿಯನ್ನು ಕೊಳ್ಳುವುದಿಲ್ಲ, ಯಾವುದೇ ಲಾಭ ತರುವ ವ್ಯವಹಾರವನ್ನಾಗಲಿ, ಉದ್ದಿಮೆಯನ್ನಾಗಲಿ ನಡೆಸುವುದಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News