ಹೈಕೋರ್ಟ್ ತೀರ್ಪಿನ ಮೇಲೆ ನಿರ್ಧಾರವಾಗಲಿರುವ ಮೆಟ್ರೊ ನೌಕರರ ಮುಷ್ಕರ

Update: 2018-06-03 11:55 GMT

ಬೆಂಗಳೂರು, ಜೂ.3: ಹೈಕೋರ್ಟ್ ನೀಡುವ ತೀರ್ಪಿನ ಆಧಾರದ ಮೇಲೆ ಮುಷ್ಕರ ನಡೆಸಬೇಕೆ ಅಥವಾ ಬೇಡವೇ ಎಂಬುದನ್ನು ಸೋಮವಾರ(ಜೂ.4) ಮಧ್ಯಾಹ್ನದ ವೇಳೆಗೆ ನಿರ್ಧರಿಸಲು ಮೆಟ್ರೊ ನೌಕರರ ಸಂಘ ನಿರ್ಧರಿಸಿದೆ. ಸದ್ಯಕ್ಕೆ ಮುಷ್ಕರ ನಡೆಸುವ ತೀರ್ಮಾನವನ್ನು ಮೆಟ್ರೊ ನೌಕರರು ಕೈಬಿಡಲಾಗಿದೆ ಎಂದು ಮೆಟ್ರೊ ನೌಕರರ ಒಕ್ಕೂಟದ ಉಪಾಧ್ಯಕ್ಷ ಸೂರ್ಯನಾರಾಯಣ ತಿಳಿಸಿದ್ದಾರೆ.

ಎಂದಿನಂತೆ ಸೋಮವಾರ ಬೆಳಗ್ಗೆ ಮೆಟ್ರೋ ಸಂಚಾರ ಇರುತ್ತದೆ. ವೇತನ ಹೆಚ್ಚಳಕ್ಕೆ ಆಗ್ರಹ ಸೇರಿದಂತೆ ಮೆಟ್ರೋ ಒಕ್ಕೂಟ ಸ್ಥಾಪಿಸಲು ಮೆಟ್ರೋ ನೌಕರರು ಮುಷ್ಕರ ಆರಂಭಿಸಲು ನಿರ್ಧರಿಸಿದ್ದರು.

ಈ ಸಂಬಂಧ ಹೈಕೋರ್ಟ್‌ನಲ್ಲಿ ವಿಚಾರಣೆಯಿದ್ದು, ಕೋರ್ಟ್ ವಿಚಾರಣೆ ಇರುವುದರಿಂದ ನೌಕರರು ಮುಷ್ಕರವನ್ನು ಸದ್ಯಕ್ಕೆ ಕೈಬಿಟ್ಟಿದ್ದಾರೆ. ಒಂದು ವೇಳೆ ಮುಷ್ಕರ ನಡೆಸಿದರೂ ಬೇರೆ ರಾಜ್ಯದ ಮೆಟ್ರೋ ಸಿಬ್ಬಂದಿಯನ್ನು ಕರೆತಂದು ಮೆಟ್ರೋ ಸಂಚಾರಕ್ಕೆ ಅನುವು ಮಾಡಿಕೊಡಲು ಸರಕಾರ ವ್ಯವಸ್ಥೆ ಕೂಡ ಕಲ್ಪಿಸಿದೆ. ಒಕ್ಕೂಟ ಸ್ಥಾಪನೆ ವಿವಾದ ನ್ಯಾಯಾಲಯದಲ್ಲಿದ್ದು, ನ್ಯಾಯಾಲಯ ಯಾವ ತೀರ್ಮಾನ ತೆಗೆದುಕೊಳ್ಳಲಿದೆ ಎಂಬುದು ಕಾದು ನೋಡಿ ಮೆಟ್ರೋ ಸಿಬ್ಬಂದಿ ತಮ್ಮ ಮುಂದಿನ ಹೋರಾಟದ ರೂಪುರೇಷೆಗಳನ್ನು ಮಾಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News