×
Ad

ಬೆಂಗಳೂರು: ಜೂ.10 ರಂದು ಜೀವನ್ಮುಖಿ ಪ್ರಶಸ್ತಿ ಪ್ರದಾನ

Update: 2018-06-03 18:06 IST

ಬೆಂಗಳೂರು, ಜೂ.3: ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ ವತಿಯಿಂದ ಜೀವನ್ಮುಖಿ ಪತ್ರಿಕೆಯ 8ನೆ ವಾರ್ಷಿಕೋತ್ಸವದ ಪ್ರಯುಕ್ತ ಜೂ.10ರಂದು ನಗರದ ನಯನ ಸಭಾಂಗಣದಲ್ಲಿ ಜೀವನ್ಮುಖಿ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಗಿದೆ.

ಹಿರಿಯ ಪತ್ರಕರ್ತ ಡಾ.ಪಿ.ರಾಮಯ್ಯ, ಉಪ ಪೊಲೀಸ್ ಆಯುಕ್ತ ಡಾ.ಎಂ.ಜಿ.ಬೋರಲಿಂಗಯ್ಯ, ಜಿಎಸ್‌ಟಿ ಉಪ ಆಯುಕ್ತ ಡಾ.ಸಿ.ಸೋಮಣ್ಣ ಹಾಗೂ ಪಿ.ಚಂದ್ರವೇಲು ರವರಿಗೆ ಜೀವನ್ಮುಖಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಇದರ ಜೊತೆಗೆ ಸುಮಾರು 10ಮಂದಿ ಬಾಲಕ-ಬಾಲಕಿಯರಿಗೆ ಜೀವನ್ಮುಖಿ ಪ್ರತಿಭಾ ಪ್ರಶಸ್ತಿ ನೀಡಲಾಗುತ್ತಿದೆ.

ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ನಿವೃತ್ತ ನ್ಯಾ.ಎ.ಜೆ.ಸದಾಶಿವ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎನ್.ಆರ್.ವಿಶುಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸಂಸ್ಕೃತಿಕ ವೇದಿಕೆಯ ಅಧ್ಯಕ್ಷ ಟಿ.ಸುರೇಶ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News