ಅಲ್ ಖಫ್ಜಿ: ಇಂಡಿಯನ್ ಸೋಶಿಯಲ್ ಫೋರಂನಿಂದ ಇಫ್ತಾರ್ ಮೀಟ್

Update: 2018-06-04 06:00 GMT

ಸೌದಿ ಅರೇಬಿಯಾ, ಜೂ.4: ಇಂಡಿಯನ್ ಸೋಶಿಯಲ್ ಫೋರಂನ  ಕರ್ನಾಟಕ ಚಾಪ್ಟರ್ ಅಲ್ ಖಫ್ಜಿ ಘಟಕದ ವತಿಯಿಂದ ಅನಿವಾಸಿ ಭಾರತೀಯರಿಗಾಗಿ  ಇಫ್ತಾರ್ ಕೂಟವು ಅಲ್ ಖಫ್ಜಿಯ ಅಲ್ ವಾದಿ ಕೂರಾ ಆಡಿಟೋರಿಯಂನಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಇಂಡಿಯನ್ ಸೋಶಿಯಲ್ ಫೋರಂ ರಾಜ್ಯ ಸಮಿತಿಯ ಸದಸ್ಯ ಮೀರಾಜ್ ಅಹ್ಮದ್ ಗುಲ್ಬರ್ಗಾ  ರಂಝಾನ್ ಸಂದೇಶ ಹಾಗೂ ಭಾರತದ ಪ್ರಸಕ್ತ ಸನ್ನಿವೇಶಗಳ ಬಗ್ಗೆ ಮಾತನಾಡಿದರು.

ಇಂಡಿಯನ್ ಸೋಶಿಯಲ್ ಫೋರಂ ಮುಖಂಡರಾದ ಫೈರೋಝ್ ಕಲ್ಲಡ್ಕ, ಸಮೀರ್ ಮೂಳೂರು, ತನ್ವೀರ್ ಬಿಹಾರ, ಸಿಹಾಬ್ ಕೇರಳ, ಅಬೂಬಕರ್ ಕೃಷ್ಣಾಪುರ, ಶಾಮಿಲ್ ಕೈಕಂಬ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ  ಉಪಸ್ಥಿತರಿದ್ದರು.

ಇಂಡಿಯನ್ ಸೋಶಿಯಲ್ ಫೋರಂ ಇದರ ಸಾಮುದಾಯಿಕ ಸೇವೆಗಳ ಬಗ್ಗೆ ಹಾಗೂ ಸಂಘಟನೆಯ ಸಾಮಾಜಿಕ ಕಳಕಳಿಯ ಬಗ್ಗೆ ಕಾರ್ಯಕ್ರಮದಲ್ಲಿ ಮಾಹಿತಿ ನೀಡಲಾಯಿತು.

ಇಂಡಿಯನ್ ಸೋಶಿಯಲ್ ಫೋರಂ ಅಲ್ ಖಫ್ಜಿ ಘಟಕದ ಸದಸ್ಯರ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

ಅಲ್ ಖಫ್ಜಿ ಹಲಾವಾರು ಅನಿವಾಸಿ ಭಾರತೀಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಾಮೀಲ್ ಕೈಕಂಬ  ಕಾರ್ಯಕ್ರಮವನ್ನು ನಿರೂಪಿಸಿದರು. ಶಿಹಾಬ್ ಕೇರಳ  ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News