‘ನೀಟ್’ ಪರೀಕ್ಷೆ: ಕಲ್ಪನಾ ಕುಮಾರಿ ಟಾಪರ್

Update: 2018-06-04 12:47 GMT

ಹೊಸದಿಲ್ಲಿ, ಜೂ.4: 2018ನೇ ಸಾಲಿನ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್)ಯ ಫಲಿತಾಂಶ ಪ್ರಕಟವಾಗಿದು ಬಿಹಾರದ ಕಲ್ಪನಾ ಕುಮಾರಿ ಅಗ್ರ ರ್ಯಾಂಕ್ ಗಳಿಸಿದ್ದಾರೆ. ಪರೀಕ್ಷೆ ತೇರ್ಗಡೆಯಾದವರಲ್ಲಿ ಉತ್ತರಪ್ರದೇಶದ ವಿದ್ಯಾರ್ಥಿಗಳು ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ. ಕಲ್ಪನಾ ಕುಮಾರಿ 691 ಅಂಕ ಪಡೆದು ಶೇ.99.99 ಅಂಕ ಗಳಿಸಿದ್ದರೆ ತೆಲಂಗಾಣದ ರೋಹನ್ ಪುರೋಹಿತ್ ಮತ್ತು ದಿಲ್ಲಿಯ ಹಿಮಾಂಶು ಶರ್ಮ ತಲಾ 690 ಅಂಕಗಳೊಂದಿಗೆ ದ್ವಿತೀಯ ರ್ಯಾಂಕ್ ಗಳಿಸಿದ್ದಾರೆ. ದಿಲ್ಲಿಯ ಅರೋಶ್ ಧಮೀಜ ಮತ್ತು ರಾಜಸ್ತಾನದ ಪ್ರಿನ್ಸ್ ಚೌಧರಿ ತಲಾ 686 ಅಂಕಗಳೊಂದಿಗೆ ತೃತೀಯ ಸ್ಥಾನ ಗಳಿಸಿದ್ದಾರೆ.

ಒಟ್ಟು 13.36 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು , 12.69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಇವರಲ್ಲಿ 7.14 ಲಕ್ಷ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಉತ್ತರಪ್ರದೇಶದ 76,778 ವಿದ್ಯಾರ್ಥಿಗಳು, ಕೇರಳದ 72,000ಕ್ಕಿಂತಲೂ ಹೆಚ್ಚು ಮತ್ತು ಮಹಾರಾಷ್ಟ್ರದ 70,000ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಫಲಿತಾಂಶವನ್ನು ಸಿಬಿಎಸ್‌ಇಯ ಅಧಿಕೃತ ವೆಬ್‌ಸೈಟ್ www.cbseneet.nic.in;  www.cbseresults.nic.in    ಪ್ರಕಟಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಪಡೆಯಲು ಮೇ 6ರಂದು ದೇಶದಾದ್ಯಂತ 136 ನಗರಗಳಲ್ಲಿ 11 ಭಾಷೆಗಳಲ್ಲಿ ನಡೆದ ನೀಟ್ ಪರೀಕ್ಷೆಯಲ್ಲಿ ಒಟ್ಟು 13,26,725 ಅಭ್ಯರ್ಥಿಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News