ಯುಎಇ: 8,000 ಮಿತ್ಸುಬಿಶಿ ವಾಹನಗಳು ವಾಪಸ್

Update: 2018-06-04 15:33 GMT

ದುಬೈ, ಜೂ. 4: 2013 ಮತ್ತು 2016ರ ನಡುವಿನ 8,000ಕ್ಕೂ ಅಧಿಕ ಮಿತ್ಸುಬಿಶಿ ವಾಹನಗಳನ್ನು ಯುಎಇಯಲ್ಲಿ ಹಿಂದಕ್ಕೆ ಪಡೆಯಲಾಗುತ್ತಿದೆ. ಈ ವಾಹನಗಳಲ್ಲಿ ಬ್ರೇಕ್ ಸಮಸ್ಯೆ ತಲೆದೋರಿರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.

‘‘ಪಾರ್ಕಿಂಗ್ ಬ್ರೇಕ್ ಶಾಫ್ಟ್ ಬೂಟ್ಸ್‌ನ ಅಸಮರ್ಪಕ ಸೀಲಿಂಗ್‌ನ ಹಿನ್ನೆಲೆಯಲ್ಲಿ ಅವುಗಳಿಗೆ ನೀರು ನುಗ್ಗಬಹುದು ಹಾಗೂ ಅದರಿಂದಾಗಿ ಶಾಫ್ಟ್ ತುಕ್ಕು ಹಿಡಿಯಬಹುದು. ನಿರಂತರ ಬಳಕೆಯಿಂದಾಗಿ ಇಂಟರ್‌ನಲ್ ಕ್ಯಾಲಿಪರ್ ಸವೆಯುತ್ತದೆ. ಹಲವು ಸಂದರ್ಭಗಳಲ್ಲಿ, ನಿಲ್ಲಿಸಿದ ವಾಹನಗಳು ತಮ್ಮಷ್ಟಕ್ಕೆ ತಾವು ಚಲಿಸಬಹುದಾಗಿದೆ’’ ಎಂದು ಹೇಳಿಕೆಯೊಂದರಲ್ಲಿ ವಾಹನ ತಯಾರಿಕಾ ಸಂಸ್ಥೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News