ಫ್ರಾನ್ಸ್ ರಾಯಭಾರಿ- ಡಿಸಿಎಂ ಪರಮೇಶ್ವರ್ ಚರ್ಚೆ

Update: 2018-06-07 14:46 GMT

ಬೆಂಗಳೂರು, ಜೂ.7: ರಾಜಧಾನಿ ಬೆಂಗಳೂರು ವ್ಯಾಪ್ತಿಯಲ್ಲಿ ಮೂಲಸೌಕರ್ಯ ಒದಗಿಸುವ ಸಂಬಂಧ ಫ್ರಾನ್ಸ್ ದೇಶದ ರಾಯಭಾರಿಗಳೊಂದಿಗೆ ಗುರುವಾರ ಚರ್ಚಿಸಲಾಯಿತು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.

ನಗರದ ಕುಮಾರ ಕೃಪಾ ಅಥಿತಿ ಗೃಹದಲ್ಲಿ ಭಾರತದ ಫ್ರಾನ್ಸ್ ದೇಶದ ರಾಯಭಾರಿಗಳಾದ ಎಚ್.ಇ.ಅಲೆಕ್ಸಾಂಡ್ರೆ ಝೈಗ್ಲರ್ ಹಾಗೂ ಕಾನ್ಸುಲ್ ಜನರಲ್ ಆಫ್ ಫ್ರನ್ಸಿಕೋಯ್ಸಿ ಗಾಟಿಯರ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಇದೊಂದು ಸೌಜನ್ಯದ ಭೇಟಿಯಾಗಿದ್ದು, ನಗರಾಭಿವೃದ್ಧಿ ಮೂಲಸೌಕರ್ಯ, ಶಿಕ್ಷಣ, ಪೊಲೀಸ್ ವ್ಯವಸ್ಥೆ ಸುಧಾರಣೆ, ತ್ಯಾಜ್ಯ ವಿಲೇವಾರಿ, ರಸ್ತೆ ಸುಧಾರಣೆ ಬಗ್ಗೆ ಚರ್ಚೆ ಮಾಡಿದ್ದೇನೆ. ಬೆಂಗಳೂರಿನಲ್ಲಿ 150ಕ್ಕೂ ಅಧಿಕ ಫ್ರೆಂಚ್ ಕಂಪೆನಿಗಳು ಕಾರ್ಯ ನಿರ್ವಹಿಸುತ್ತಿವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News