ಖಾತೆ ಹಂಚಿಕೆಗೆ ಮೊದಲೇ ಮೂವರು ಸಚಿವರಿಂದ ಕಚೇರಿ ಪ್ರವೇಶ

Update: 2018-06-08 13:03 GMT

ಬೆಂಗಳೂರು, ಜೂ. 8: ಖಾತೆ ಹಂಚಿಕೆಗೆ ಮೊದಲೇ ನೂತನವಾಗಿ ಪ್ರಮಾಣ ವಚನ ಸ್ವೀಕರಿಸಿದ ಸಚಿವರಿಗೆ ಕೊಠಡಿ ಹಂಚಿಕೆ ಮಾಡಿದ್ದು, ಸಿ.ಎಸ್.ಪುಟ್ಟರಾಜು, ಎಂ.ಸಿ.ಮನಗೂಳಿ ಹಾಗೂ ವೆಂಕಟರಾವ್ ನಾಡಗೌಡ ಶನಿವಾರ ಅಧಿಕೃತವಾಗಿ ವಿಧಾನಸೌಧದಲ್ಲಿ ತಮ್ಮ ಕಚೇರಿ ಪ್ರವೇಶಿಸಿದರು.

ವಿಧಾನಸೌಧದ ಮೂರನೆ ಮಹಡಿಯಲ್ಲಿ ಸಿ.ಎಸ್.ಪುಟ್ಟರಾಜು ಅವರಿಗೆ 343 ಸಂಖ್ಯೆ ಕೊಠಡಿ, ಎಂ.ಸಿ.ಮನಗೂಳಿಗೆ 301 ಸಂಖ್ಯೆ ಕೊಠಡಿ ಹಾಗೂ ವೆಂಕಟರಾವ್ ನಾಡಗೌಡ ಅವರಿಗೆ 305ನೆ ಸಂಖ್ಯೆ ಕೊಠಡಿಯನ್ನು ಹಂಚಿಕೆ ಮಾಡಿದ್ದು, ಮೂರು ಮಂದಿ ಸಚಿವರು ತಮ್ಮ ಕೊಠಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News