ಗೋಧ್ರಾದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ: 6 ಮಂದಿಗೆ ಗಾಯ

Update: 2018-06-09 14:05 GMT

ಗೋಧ್ರಾ, ಜೂ.9: ಟ್ರಾಫಿಕ್ ಸಂಬಂಧಿತ ವಿಷಯಕ್ಕೆ ಸಂಬಂಧಿಸಿ ಎರಡು ಸಮುದಾಯಗಳ ನಡುವೆ ಆರಂಭವಾದ ಘರ್ಷಣೆಯಲ್ಲಿ ಆರು ಮಂದಿ ಗಾಯಗೊಂಡಿರುವ ಘಟನೆ ಗುಜರಾತ್ ನ ಗೋಧ್ರಾದಲ್ಲಿ ನಡೆದಿದೆ.

ಖಾದಿ ಫಾಲಿಯಾ ಎಂಬಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. “ವಿಭಿನ್ನ ಸಮುದಾಯಕ್ಕೆ ಸೇರಿದ ಎರಡು ಗುಂಪುಗಳು ಪರಸ್ಪರ ಕಲ್ಲುತೂರಾಟ ನಡೆಸಿ, ಹೊಡೆದಾಟ ನಡೆಸಿದೆ. ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಎಂ.ಸಿ. ಸಂಗ್ಟ್ಯಾನಿ ಹೇಳಿದ್ದಾರೆ.

ರಸ್ತೆ ಬದಿ ದ್ವಿಚಕ್ರ ವಾಹವವೊಂದನ್ನು ನಿಲ್ಲಿಸಿದ್ದಕ್ಕೆ ಆಟೊ ರಿಕ್ಷಾ ಸವಾರನೊಬ್ಬ ಆಕ್ಷೇಪ ವ್ಯಕ್ತಪಡಿಸಿದ್ದ. ದ್ವಿಚಕ್ರ ವಾಹನವನ್ನು ಬದಿಗೆ ಸರಿಸುವಂತೆ ಹೇಳಿದಾಗ ಮಾತಿಗೆ ಮಾತು ಬೆಳೆಯಿತು ಎನ್ನಲಾಗಿದೆ.

“ಮಾತಿನ ಚಕಮಕಿ ಹೊಡೆದಾಟದ ಮಟ್ಟಕ್ಕೂ ತಲುಪಿತು. ಎರಡೂ ಕಡೆಯಿಂದ ದಾಳಿ ನಡೆಯಿತು. ಕಲ್ಲು ತೂರಾಟದಿಂದಾಗಿ ಎರಡೂ ಸಮುದಾಯಕ್ಕೆ ಸೇರಿದ 6 ಜನರಿಗೆ ಗಾಯಗಳಾಗಿವೆ” ಎಂದು ಪೊಲೀಸ್ ಅಧಿಕಾರಿ  ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News