ಸಯ್ಯದ್ ಮುದೀರ್ ಆಗಾ ನಿಧನಕ್ಕೆ ಸಂತಾಪ
Update: 2018-06-09 20:30 IST
ಬೆಂಗಳೂರು, ಜೂ.9: ಹೃದಯಾಘಾತದಿಂದ ನಿಧನರಾದ ವಿಧಾನ ಪರಿಷತ್ ಸದಸ್ಯ ಸಯ್ಯದ್ ಮುದೀರ್ ಆಗಾಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್ ಸಂತಾಪ ಸೂಚಿಸಿದ್ದಾರೆ.
2012ರ ಜೂನ್ ನಲ್ಲಿ ಜೆಡಿಎಸ್ ಪಕ್ಷದಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದ ಅವರು ಸಮಾಜದ ಅಭಿವೃದ್ಧಿಗಾಗಿ ಶೈಕ್ಷಣಿಕ, ಸಾಮಾಜಿಕ, ರಾಜಕೀಯವಾಗಿ ನಿರಂತರವಾಗಿ ಶ್ರಮಿಸಿದ್ದರು. ಅಂತಹವರ ಅಕಾಲಿಕ ನಿಧನದ ಸುದ್ದಿಯು ನೋವುಂಟು ಮಾಡಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.