ಭಾರತ-ಪಾಕ್ ಸೇರ್ಪಡೆಯಿಂದ ಎಸ್‌ಸಿಒ ಬಲಿಷ್ಠ: ಚೀನಾ

Update: 2018-06-10 16:59 GMT

    ಕ್ವಿಂಗ್‌ಡಾವೊ,ಜೂ.10: ಶಾಂಘೈ ಸಹಕಾರ ಸಂಘಟನೆಗೆ ಭಾರತ ಹಾಗೂ ಪಾಕಿಸ್ತಾನದ ಪ್ರವೇಶವು, ಅದನ್ನು ಇನ್ನಷ್ಟು ಬಲಪಡಿಸಲಿದೆ ಎಂದು ಚೀನಾ ಅಧ್ಯಕ್ಷ ಕ್ಸಿಜಿನ್‌ಪಿಂಗ್ ರವಿವಾರ ಹೇಳಿದ್ದಾರೆ. ಎಂಟು ಸದಸ್ಯರ ರಾಷ್ಟ್ರಗಳ ಈ ಸಂಘಟನೆಗೆ ಮೋದಿ ಹಾಗೂ ಪಾಕ್ ಅಧ್ಯಕ್ಷ ಮಮ್ನೂನ್ ಹುಸೈನ್ ಅವರನ್ನು ಸ್ವಾಗತಿಸುತ್ತಾ ಕ್ಸಿಜಿನ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

 ಚೀನಾ ಮೂಲದ ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಓ)ಯ ಸದಸ್ಯರಾಗಿ ಭಾರತ ಹಾಗೂ ಪಾಕಿಸ್ತಾನವನ್ನು ಚೀನಾವು ಕಳೆದ ವರ್ಷ ಸೇರ್ಪಡೆಗೊಳಿಸಿತ್ತು.

ಪೂರ್ವ ಚೀನಾದ ಬಂದರು ನಗರವಾದ ಕ್ವಿಂಗ್‌ಡಾವೊದಲ್ಲಿ ನಡೆಯುತ್ತಿರುವ ಎಸ್‌ಸಿಒ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನದ ಪ್ರಧಾನಿ ಮಮ್ನೂನ್ ಹುಸೈನ್ ಅವರ ಉಪಸ್ಥಿತಿಯು ಐತಿಹಾಸಿಕ ಮಹತ್ವವನ್ನು ಹೊಂದಿದೆದೆಯೆಂದು ಕ್ಸಿ ಜಿನ್‌ಪಿಂಗ್ ಸಮಾವೇಶದ ಉದ್ಘಾಟನಾ ಭಾಷಣದಲ್ಲಿ ತಿಳಿಸಿದರು.

 ಶೃಂಗಸಭೆಯ ಸದಸ್ಯ ರಾಷ್ಟ್ರಗಳು ಸಮಾನ, ಸಮಗ್ರ, ಸಹಕಾರಾತ್ಮಕ ಹಾಗೂ ಸುಸ್ಥಿರ ಭದ್ರತೆಗಾಗಿ ಶ್ರಮಿಸಬೇಕೆಂದು ಕ್ಸಿಜಿನ್‌ಪಿಂಗ್ ಕರೆ ನೀಡಿದರು. ಶೀತಲಯುದ್ಧ ಕಾಲದ ಮಾನಸಿಕತೆಯನ್ನು ಹಾಗೂ ಬಣಗಳ ನಡುವೆ ಸಂಘರ್ಷವನ್ನು ತಿರಸ್ಕರಿಸಬೇಕೆಂದು ಹೇಳಿದ ಅವರು, ಇತರ ದೇಶಗಳ ಭದ್ರತೆಯ ಬೆಲೆತೆತ್ತು ತನಗಾಗಿ ಮಾತ್ರ ಸಂಪೂರ್ಣ ಭದ್ರತೆಯನ್ನು ಬಯಸುವ ಪದ್ಧತಿಯನ್ನು ವಿರೋಧಿಸಬೇಕೆಂದು ಚೀನಾದ ಪ್ರಧಾನಿ ಹೇಳಿದರು.

   ಯುದ್ಧಪೀಡಿತ ಅಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪನೆಗಾಗಿ ಎಸ್‌ಸಿಓ ಹಾಗೂ ಅಫ್ಘಾನಿಸ್ತಾನವ ಸಂಪರ್ಕ ಸಮಿತಿಗೆ ಪೂರ್ಣ ಮಟ್ಟದ ಪಾತ್ರ ವಹಿಸಲು ಅವಕಾಶ ನೀಡಬೇಕೆಂದು ಕ್ಸಿ ಜಿನ್‌ಪಿಂಗ್ ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News