ಮಾದರಿ ನೀತಿ ಸಂಹಿತೆ ಉಲ್ಲಂಘನೆ | ಜಗನ್ ಮೋಹನ್ ರೆಡ್ಡಿ, ಚಂದ್ರಬಾಬು ನಾಯ್ಡುಗೆ ಚುನಾವಣಾ ಆಯೋಗ ವಾಗ್ದಂಡನೆ

Update: 2024-05-07 15:45 GMT

ಜಗನ್ ಮೋಹನ್ ರೆಡ್ಡಿ, ಚಂದ್ರಬಾಬು ನಾಯ್ಡು | PC : PTI 

ಅಮರಾವತಿ: ಪರಸ್ಪರರ ವಿರುದ್ಧ ನೀಡಿರುವ ಹೇಳಿಕೆಗಳಲ್ಲಿ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವುದಕ್ಕಾಗಿ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಮತ್ತು ತೆಲುಗು ದೇಶಮ್ ಪಕ್ಷದ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡುಗೆ ಚುನಾವಣಾ ಆಯೋಗವು ಸೋಮವಾರ ವಾಗ್ದಂಡನೆ ವಿಧಿಸಿದೆ.

ಕಳೆದ ಹಲವು ದಿನಗಳಲ್ಲಿ, ಚುನಾವಣಾ ಸಭೆಗಳಲ್ಲಿ ರೆಡ್ಡಿ ಮತ್ತು ನಾಯ್ಡು ಪರಸ್ಪರರ ವಿರುದ್ಧ ನಿಂದನಾತ್ಮಕ ಮಾತುಗಳನ್ನು ಆಡುವ ಮೂಲಕ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಮುಖ್ಯಮಂತ್ರಿ ರೆಡ್ಡಿ, ಚಂದ್ರಬಾಬು ನಾಯ್ಡುರನ್ನು ‘‘ಅಪರಾಧ ಪ್ರವೃತ್ತಿಯ ವ್ಯಕ್ತಿ’’, ‘‘ಕೊಲೆಗಡುಕ’’ ಮತ್ತು ‘‘ವಿಕೃತ ದ್ವೇಷಿ’’ ಎಂಬುದಾಗಿ ಕರೆದಿದ್ದರು.

ಅದೇ ವೇಳೆ, ಚಂದ್ರಬಾಬು ನಾಯ್ಡು, ರೆಡ್ಡಿಯನ್ನು ‘‘ವಿಷ ಕಾರುವ ವ್ಯಕ್ತಿ’’, ‘‘ಮಯಾಲಾ ಫಕೀರ್ (ಚಿತ್ರವೊಂದರ ಪಾತ್ರ)’’ ಮತ್ತು ‘‘ನಕಲಿ ವ್ಯಕ್ತಿ’’ ಮುಂತಾದ ಪದಗಳಿಂದ ಜರಿದಿದ್ದರು.

ಆಂಧ್ರಪ್ರದೇಶದಲ್ಲಿ 175 ಸದಸ್ಯರ ವಿಧಾನಸಭೆ ಮತ್ತು 25 ಲೋಕಸಭಾ ಸ್ಥಾಗಳಿಗೆ ಮೇ 13ರಂದು ಮತದಾನ ನಡೆಯಲಿದೆ. ಮತಗಳ ಎಣಿಕೆ ಜೂನ್ 4ರಂದು ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News