ಮೋದಿ-ಮಮ್ನೂನ್ ಸಂಕ್ಷಿಪ್ತ ಮಾತುಕತೆ

Update: 2018-06-10 17:20 GMT

ಕ್ವಿಂಗ್‌ಡಾವೊ,ಜೂ.10: ಚೀನಾದ ಕ್ವಿಂಗ್‌ಡಾವೊ ನಗರದಲ್ಲಿ ನಡೆಯುತ್ತಿರುವ ಶಾಂಘೈ ಶೃಂಗಸಭೆಯಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ರವಿವಾರ ಪಾಕ್ ನ ಅಧ್ಯಕ್ಷ ಮಮ್ನೂನ್ ಹುಸೈನ್ ಜೊತೆ ಸಂಕ್ಷಿಪ್ತ ಮಾತುಕತೆ ನಡೆಸಿದರು.

18ನೇ ಶಾಂಘೈ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಆಗಮಿಸಿರುವ ಉಭಯದೇಶಗಳ ನಾಯಕರು, ಎಂಟು ಸದಸ್ಯರ ರಾಷ್ಟಗಳ ಈ ಒಕ್ಕೂಟದಲ್ಲಿ ಇಂದು ಕೆಲವು ಒಪ್ಪಂದಗಳಿಗೆ ಸಹಿಹಾಕಿದ ಸಂದರ್ಭದಲ್ಲಿ ಪರಸ್ಪರ ಹಸ್ತಲಾಘವ ಮಾಡಿದರು.

ಜಮ್ಮುಕಾಶ್ಮೀರದ ಉರಿಯಲ್ಲಿನ ಭಾರತದ ಸೇನಾ ನೆಲೆಯ ಮೇಲೆ 2016ರಲ್ಲಿ ಪಾಕ್ ಮೂಲದ ಉಗ್ರರು ದಾಳಿ ನಡೆಸಿದ ಹಿನ್ನೆಲೆಯಲ್ಲಿ ಭಾರತವು ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಿದ್ದ 19ನೇ ಸಾರ್ಕ್ ಸಮಾವೇಶವನ್ನು ಬಹಿಷ್ಕರಿಸಿತ್ತು. ಆನಂತರ ಪಾಕಿಸ್ತಾನವು ಸಾರ್ಕ್ ಸಮಾವೇಶವನ್ನು ಮುಂದೂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News