×
Ad

ಬೆಂಗಳೂರು: ಕಟ್ಟಡದಿಂದ ಹಾರಿ ಯುವಕ ಆತ್ಮಹತ್ಯೆ

Update: 2018-06-11 18:43 IST

ಬೆಂಗಳೂರು, ಜೂ.11: ಕಟ್ಟಡವೊಂದರ 12ನೇ ಮಹಡಿಯ ಕಿಟಕಿಯಿಂದ ಜಿಗಿದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಇಲ್ಲಿನ ವೈಟ್‌ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಧ್ಯಪ್ರದೇಶ ಮೂಲದ ಭುವೇಶ್(23) ಮೃತಪಟ್ಟ ಯುವಕ ಎಂದು ಪೊಲೀಸರು ತಿಳಿಸಿದ್ದಾರೆ.

ನಗರದ ವೈಟ್‌ಫೀಲ್ಡ್ ವ್ಯಾಪ್ತಿಯ ಐಟಿಪಿಎಲ್‌ನ ಎಂಯು (ಸಿ) ನ್ಯೂ ಸಿಗ್ಮಾ ಹೆಸರಿನ ಖಾಸಗಿ ಕಂಪೆನಿಯಲ್ಲಿ ನೌಕರನಾಗಿದ್ದ ಭುವೇಶ್, ಸೋಮವಾರ ಸಂಜೆ ಏಕಾಏಕಿ ಕಟ್ಟಡದ 12ನೇ ಹಂತದ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಘಟನೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಸಂಬಂಧ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ತನಿಖೆ ಮುಂದುವರೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News