ಅಂತಾರಾಷ್ಟ್ರೀಯ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಎರಡನೇ ಸ್ಥಾನ
ಬೆಂಗಳೂರು, ಜೂ.12: ಫಿಲಿಪೈನ್ಸ್‌ನ ಸೆಬುವಿನಲ್ಲಿ ನಡೆದ ಅಂತಾರಾಷ್ಟ್ರೀಯ ದೇಹದಾರ್ಢ್ಯ ಚಾಂಪಿಯನ್‌ಶಿಪ್‌ನಲ್ಲಿ ನಗರದ ಕರ್ನಾಟಕ ಅಮೆಚೂರ್ ಬಾಡಿ ಬಿಲ್ಡರ್ಸ್ ಅಸೋಸಿಯೇಷನ್‌ನ ಕ್ರೀಡಾಪಟುಗಳು ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್ ಉಪಾಧ್ಯಕ್ಷ ಎಸ್.ಚಂದ್ರಶೇಖರ್ ಮೌಳಿ, ಸತತ ಕಠಿಣ ಪರಿಶ್ರಮದಿಂದ ಸ್ಪರ್ಧೆಯಲ್ಲಿ ಭಾಗವಹಿಸಲಾಗಿತ್ತು. ಅದರಲ್ಲಿ ಜರ್ಮನಿ ಪ್ರಬಲವಾದ ಸ್ಪರ್ಧೆ ನೀಡಿದರೂ ಎರಡನೇ ಸ್ಥಾನವನ್ನು ಪಡೆದುಕೊಳ್ಳಲಾಯಿತು ಎಂದು ಹೇಳಿದರು.
ಮೆನ್ ಬಾಡಿ ಕ್ಲಾಸ್‌ನಲ್ಲಿ ಸಿದ್ದಿಕ್ ಮೂರನೆ ಸ್ಥಾನ, ಮೆನ್ ಬಾಡಿ ಕ್ಲಾಸ್ 2(ಮೀಡಿಯಂ ಟಾಲ್) ಮನೋಜ್ ಕುಮಾರ್ ಪ್ರಥಮ ಸ್ಥಾನ, ಮಹೇಂದ್ರ ಕುಮಾರ್ ಎರಡನೇ ಸ್ಥಾನ, ಮೆನ್ ಬಾಡಿ ಕ್ಲಾಸ್3(ಮೀಡಿಯಂ) ರಾಜ ಮುರುಗನ್ ಎರಡನೆ ಸ್ಥಾನ ಹಾಗೂ ಸೈಯದ್ ಇಸ್ಮಾಯಿಲ್ ಮೂರನೇ ಸ್ಥಾನ, ಶಂಕರ್‌ಗೌಡ ಆರನೇ ಸ್ಥಾನ, ಮೆನ್ ಬಾಡಿ ಕ್ಲಾಸ್4(ಶಾರ್ಟ್) ಗಿರೀಶ್ ಕಾಂತಪ್ಪ ಶೆಟ್ಟಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಅವರು ವಿವರಿಸಿದರು.