×
Ad

ಕೇಂದ್ರ ಸರಕಾರದ ಕುಡಿಯುವ ನೀರಿನ ಅನುದಾನದಲ್ಲಿ ಶೇ.66 ರಷ್ಟು ಕಡಿತ: ಸಚಿವ ಕೃಷ್ಣಭೈರೇಗೌಡ

Update: 2018-06-12 18:34 IST

ಬೆಂಗಳೂರು, ಜೂ.12: ಕೇಂದ್ರ ಸರಕಾರ ಕುಡಿಯುವ ನೀರಿಗೆ ನೀಡುವ ಅನುದಾನವನ್ನು ಹಂತ ಹಂತವಾಗಿ ಕಡಿತಗೊಳಿಸುವ ಮೂಲಕ ರಾಜ್ಯದ ಜನತೆಗೆ ಗುಣಮಟ್ಟ ಹಾಗೂ ಸಮರ್ಪಕವಾದ ಕುಡಿಯುವ ನೀರು ಒದಗಿಸುವಿಕೆಯಿಂದ ನುಣುಚಿಕೊಳ್ಳುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಸಚಿವ ಕೃಷ್ಣಭೈರೇಗೌಡ ಆರೋಪಿಸಿದರು.

ಮಂಗಳವಾರ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಡಿಯುವ ನೀರಿಗಾಗಿ ಕೇಂದ್ರ ಸರಕಾರ ಒದಗಿಸುತ್ತಿದ್ದ ಅನುದಾನ ಬಹಳಷ್ಟು ಕಡಿಮೆಯಾಗಿದೆ. ಕಳೆದ ವರ್ಷ ಕೇಂದ್ರ ಸರಕಾರ ಕೇವಲ 268 ಕೋಟಿ ರೂ.ಗಳನ್ನು ಮಾತ್ರ ಕುಡಿಯುವ ನೀರಿಗೆ ಒದಗಿಸಿದೆ. ರಾಜ್ಯ ಸರಕಾರ 2094 ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ ಎಂದರು.

ಕೇಂದ್ರ ಸರಕಾರ 2013-14ರಲ್ಲಿ ಕುಡಿಯುವ ನೀರಿಗೆ 968 ಕೋಟಿ ರೂ. ನೀಡಿತ್ತು. ಆದರೆ, ಈಗ ಶೇ.66 ರಷ್ಟು ಅನುದಾನ ಕಡಿತವಾಗಿದೆ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News