×
Ad

ಗೌರಿ ಲಂಕೇಶ್ ಹತ್ಯೆ ಪ್ರಕರಣ: ಬಂಧಿತ ಪರಶುರಾಮ್ ಸ್ನೇಹಿತನ ವಿಚಾರಣೆ ?

Update: 2018-06-13 20:12 IST

ಬೆಂಗಳೂರು, ಜೂ.13: ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಸಿಂಧಗಿಯ ಸುನೀಲ್ ಮಡಿವಾಳಪ್ಪ ಅಗಸರ (25) ಎಂಬಾತನನ್ನು ವಶಕ್ಕೆ ಪಡೆದು ಆತನಿಂದಲೂ ಮಾಹಿತಿ ಪಡೆಯಲಾಗುತ್ತಿದೆ ಎಂದು ತಿಳಿದುಬಂದಿದೆ.

ಸುನೀಲ್ ಯಾವುದೇ ಸಂಘಟನೆ ಜೊತೆ ಸಂಪರ್ಕ ಹೊಂದಿರದಿದ್ದರೂ, ಪರಶುರಾಮ್ ಜೊತೆ ನಂಟು ಹೊಂದಿದ್ದ. ಹೀಗಾಗಿ, ನಗರಕ್ಕೆ ಕರೆದುತಂದಿದ್ದು, ಪ್ರಕರಣದಲ್ಲಿ ಆತನ ಪಾತ್ರವೇನು ಎಂಬುದರ ಬಗ್ಗೆ ತೀವ್ರ ವಿಚಾರಣೆಗೊಳಪಡಿಸಲಾಗುತ್ತಿದೆ ಎನ್ನಲಾಗಿದೆ.

ಪ್ರಕರಣ ಸಂಬಂಧ ಮೊದಲಿಗೆ ಬಂಧಿಸಲಾಗಿದ್ದ ಹಿಂದುತ್ವ ಸಂಘಟನೆಯೊಂದರ ಮುಖಂಡ ಕೆ.ಟಿ.ನವೀನ್‌ ಕುಮಾರ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ. ಉಳಿದ ಐವರನ್ನು ನ್ಯಾಯಾಲಯದ ಅನುಮತಿ ಮೇರೆಗೆ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News