ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿಗೆ ಸರಕಾರಿ ಹುದ್ದೆ ಇಲ್ಲ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2018-06-14 16:33 GMT

ಬೆಂಗಳೂರು, ಜೂ. 14: ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಅವರನ್ನು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರನ್ನಾಗಿ ನೇಮಿಸುವ ಪ್ರಸ್ತಾಪ ಸರಕಾರ ಮುಂದಿಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾರಾಯಣಮೂರ್ತಿ ಅವರಿಗೆ ವಯಸ್ಸಾಗಿದೆ. ಯಾವುದೇ ಹುದ್ದೆಯನ್ನು ನಿರ್ವಹಿಸುವ ಶಕ್ತಿ ಅವರಲ್ಲಿಲ್ಲ. ಹೀಗಾಗಿ ಯಾವುದೇ ಸರಕಾರಿ ಹುದ್ದೆಗೆ ಅವರನ್ನು ನೇಮಿಸುವ ಪ್ರಸ್ತಾವವಿಲ್ಲ ಎಂದರು.

ಆದರೆ, ಅವರ ಸಲಹೆಗಳನ್ನು ಸರಕಾರ ಪಡೆದುಕೊಳ್ಳಲಿದೆ. ಆಡಳಿತ, ಬೆಂಗಳೂರು ಅಭಿವೃದ್ಧಿ ಸೇರಿದಂತೆ ಎಲ್ಲ ವಿಷಯದಲ್ಲೂ ಅವರ ಸಲಹೆ ಪಡೆಯಲಾಗುವುದು ಎಂದ ಅವರು, ಬೆಂಗಳೂರು ಅಭಿವೃದ್ಧಿಗೆ ಹಿಂದಿನ ಸರಕಾರ ರಚಿಸಿದ್ದ ವಿಷನ್ ಗ್ರೂಪ್‌ನನ್ನು ರದ್ದು ಮಾಡಿದೆ. ಅಭಿವೃದ್ಧಿಗೆ ಸಂಬಂಧಪಟ್ಟಂತೆ ಯಾರು ಬೇಕಾದರೂ ಸಲಹೆ ನೀಡಬಹುದು. ವಿಧಾನಸೌಧ ಪ್ರತಿಯೊಬ್ಬ ನಾಗರಿಕರಿಗೂ ಮುಕ್ತವಾಗಿದೆ. ಎಲ್ಲರ ಸಲಹೆಯನ್ನು ಪಡೆಯಲಾಗುತ್ತದೆ ಎಂದ ಅವರು, ಸಲಹೆ ಪಡೆಯುವ ಸಲುವಾಗಿಯೇ ತಜ್ಞರ ಸಮಿತಿ ರಚಿಸುವ ಅಗತ್ಯ ಇಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News