ಏಕೈಕ ಟೆಸ್ಟ್: ಭಾರತ 474 ರನ್‌ಗೆ ಆಲೌಟ್

Update: 2018-06-15 07:13 GMT

 ಬೆಂಗಳೂರು, ಜೂ.15: ಅಫ್ಘಾನಿಸ್ತಾನ ವಿರುದ್ಧ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ 474 ರನ್ ಗಳಿಸಿ ಆಲೌಟಾಗಿದೆ.
ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಎರಡನೇ ದಿನದಾಟವಾದ ಶುಕ್ರವಾರ 6 ವಿಕೆಟ್ ನಷ್ಟಕ್ಕೆ 347 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಭಾರತಕ್ಕೆ ಹಾರ್ದಿಕ್ ಪಾಂಡ್ಯ(71) ಅರ್ಧಶತಕದ ಕೊಡುಗೆ ನೀಡಿ ಆಧರಿಸಿದರು. ಉಮೇಶ್ ಯಾದವ್(ಔಟಾಗದೆ 26), ರವೀಂದ್ರ ಜಡೇಜ(20) ಹಾಗೂ ಆರ್.ಅಶ್ವಿನ್(18)ಎರಡಂಕೆಯ ಸ್ಕೋರ್ ದಾಖಲಿಸಿದರು.
10 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಪಾಂಡ್ಯ ಅವರು ಜಡೇಜ ಅವರೊಂದಿಗೆ 8ನೇ ವಿಕೆಟ್‌ಗೆ 67 ರನ್ ಜೊತೆಯಾಟ ನಡೆಸಿದರು.
ಅಫ್ಘಾನಿಸ್ತಾನದ ಪರ ಅಹ್ಮದ್‌ಝೈ(3-51)ಯಶಸ್ವಿ ಬೌಲರ್ ಎನಿಸಿಕೊಂಡರು. ವಫದಾರ್(2-100) ಹಾಗೂ ರಶೀದ್ ಖಾನ್(2-154) ತಲಾ ಎರಡು ವಿಕೆಟ್ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News