ಪರಶುರಾಮ ವಾಗ್ಮೋರೆ ಪರ ಪೋಸ್ಟ್ : ಶ್ರೀರಾಮ ಸೇನೆಯ ರಾಕೇಶ್ ಮಠ ಎಸ್‌ಐಟಿ ವಶಕ್ಕೆ

Update: 2018-06-16 12:39 GMT

ಬೆಂಗಳೂರು, ಜೂ.16: ಗೌರಿ ಲಂಕೇಶ್ ಹತ್ಯೆ ಪ್ರಕರಣದ ಸಂಬಂಧ ಶ್ರೀರಾಮ ಸೇನೆ ವಿಜಯಪುರ ಜಿಲ್ಲಾಧ್ಯಕ್ಷ ರಾಕೇಶ್ ಮಠನನ್ನು ಎಸ್‌ಐಟಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಪರಶುರಾಮ ವಾಗ್ಮೋರೆ ಪರವಾಗಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿರುವ ಹಿನ್ನೆಲೆಯಲ್ಲಿ ಎಸ್‌ಐಟಿ ತಂಡ ರಾಕೇಶ್ ಮಠನನ್ನು ಬಂಧಿಸಿದ್ದಾರೆ. ಶನಿವಾರ ಬೆಳಗ್ಗೆಯಿಂದ ಸಂಜೆವರೆಗೆ ರಾಕೇಶ್ ಮಠನನ್ನು ವಿಚಾರಣೆ ನಡೆಸಿದ ಎಸ್‌ಐಟಿ ತಂಡ ಹಲವು ಪ್ರಶ್ನೆಗಳಿಗೆ ಉತ್ತರವನ್ನು ಪಡೆದಿದ್ದಾರೆ ಎನ್ನಲಾಗಿದೆ.

ಮುಖ್ಯವಾಗಿ ಆರೋಪಿ ಪರಶುರಾಮ ವಾಗ್ಮೋರೆ ಹಾಗೂ ರಾಕೇಶ್ ಮಠನ ಸ್ನೇಹ, ಶ್ರೀರಾಮ ಸೇನೆಯೊಂದಿಗಿನ ಸಂಪರ್ಕ ಯಾವ ರೀತಿಯದು ಹಾಗೂ ವಾಗ್ಮೋರೆಯ ವೈಯಕ್ತಿಕ ಹಾಗೂ ರಾಜಕೀಯ ಹಿನ್ನೆಲೆಯ ಕುರಿತು ರಾಕೇಶ್ ಮಠನ ಬಳಿ ವಿಚಾರಣೆ ನಡೆಸುತ್ತಿದ್ದಾರೆ.

ಹಿನ್ನೆಲೆ: ಗೌರ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಪರಶುರಾಮ ವಾಗ್ಮೋರೆ, ತಾನೆ ಗೌರಿ ಲಂಕೇಶ್‌ಗೆ ಗುಂಡು ಹಾರಿಸಿರುವುದಾಗಿ ತಪ್ಪೊಪ್ಪಿ ಕೊಂಡಿದ್ದಾನೆ. ಈತನ ಪರವಾಗಿ ಶ್ರೀರಾಮ ಸೇನೆಯ ರಾಕೇಶ್ ಮಠ ಫೇಸ್‌ಬುಕ್‌ನಲ್ಲಿ ಪೋಸ್ಟ್‌ವೊಂದನ್ನು ಹಾಕಿ ‘ಬಂಧನಕ್ಕೊಳಗಾಗಿರುವ ಪರಶುರಾಮ ವಾಗ್ಮೋರೆ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದೆ. ಆತನ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಿ’ ಎಂದು ಮನವಿ ಮಾಡಿದ್ದಾನೆ.

ಈ ಪೋಸ್ಟ್ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಎಸ್‌ಐಟಿ ಪೊಲೀಸರು ರಾಕೇಶ್ ಮಠನನ್ನು ಬಂಧಿಸಿ ವಿಚಾರ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News