ಬಿಜೆಪಿ ನಾಯಕಿ ವಿವಾದಿತ ಪೋಸ್ಟ್: ಕಠಿಣ ಕ್ರಮ ಕೈಗೊಳ್ಳುವಂತೆ ಆಯುಕ್ತರಿಗೆ ದೂರು
Update: 2018-06-18 19:18 IST
ಬೆಂಗಳೂರು, ಜೂ.18: ಸಿಟ್ ತನಿಖಾಧಿಕಾರಿಗಳಿಂದ ಬಂಧಿತನಾಗಿರುವ ಹಿಂದುತ್ವ ಸಂಘಟನೆ ಕಾರ್ಯಕರ್ತ ಪರಶುರಾಮ್ ವಾಗ್ಮೋರೆ ಪರ ಬಿಜೆಪಿ ನಾಯಕಿ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ವಿವಾದಿತ ಪೋಸ್ಟ್ ಕುರಿತಂತೆ ತನಿಖೆ ಕೈಗೊಂಡು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಕಾರ್ಯಕರ್ತರು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಅವರಿಗೆ ದೂರು ಸಲ್ಲಿಸಿದರು.
ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಮಂಚಾಲೇಶ್ವರಿ ತೊನಶ್ಯಾಳ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪರಶುರಾಮ್ ಪರವಹಿಸಿ ವಿವಾದಿತ ಪೋಸ್ಟ್ ಅಪ್‌ಡೇಟ್ ಮಾಡಿದ್ದಾರೆ. ಇಂತಹ ಹೇಳಿಕೆಗಳು ಸಮಾಜದ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಆಗಲಿದೆ. ಹೀಗಾಗಿ, ಇವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.