ಅಮೆರಿಕದಲ್ಲಿ ಪ್ರಸಿದ್ಧ ಗಾಯಕನ ಗುಂಡಿಕ್ಕಿ ಹತ್ಯೆ

Update: 2018-06-19 06:48 GMT

ನ್ಯೂಯಾರ್ಕ್, ಜೂ.19:ಮಿಯಾಮಿಯಲ್ಲಿ  20ರ ಹರೆಯದ ರಾಪರ್ ಜಹ್ಸೆಹ್ ಅನ್ಫ್ರಾಯ್  ಎಂಬವರನ್ನು ಗುಂಡು ಹಾರಿಸಿ ಕೊಲೆಗೈದ ಘಟನೆ ಸೋಮವಾರ ನಡೆದಿದೆ.

ಗಾಯಕ ಜಹ್ಸೆಹ್ ಅವರು ಮಿಯಾಮಿಯಲ್ಲಿ ಮೋಟಾರ್ ಸೈಕಲ್ ಅಂಗಡಿಯಲ್ಲಿದ್ಗಾಗ ಅವರನ್ನು ಬಂಧೂಕುಧಾರಿಯೊಬ್ಬ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ.

ಇವರ ಕೊಲೆಗೆ ಕಾರಣ ತಿಳಿದು ಬಂದಿಲ್ಲ.ಅವರು ಹಲವು ಮಂದಿ ಕಲಾವಿದರೊಂದಿಗೆ ವೈರತ್ವ ಕಟ್ಟಿಕೊಂಡಿದ್ದರು ಎಂದು ಗೊತ್ತಾಗಿದೆ. ಅಮೆರಿಕದ ನಿಯತಕಾಲಿಕೆಯೊಂದು ಇತ್ತೀಚೆಗೆ ರಾಪರ್ ಗಳ ಪೈಕಿ ವಿವಾದಾತ್ಮಕ ವ್ಯಕ್ತಿ  ಎಂದು ಜಹ್ಸೆಹ್ ಅವರನ್ನು ಬಣ್ಣಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News