ಮುಷ್ಕರ ಮಾಡದಂತೆ ಮೆಟ್ರೊ ನೌಕರರ ಸಂಘಕ್ಕೆ ಹೈಕೋರ್ಟ್ ಸೂಚನೆ

Update: 2018-06-19 14:54 GMT

ಬೆಂಗಳೂರು, ಜೂ.19: ಮುಷ್ಕರ ಮಾಡದಂತೆ ಮೆಟ್ರೊ ನೌಕರರ ಸಂಘಕ್ಕೆ ಹೈಕೋರ್ಟ್ ನಿರ್ಬಂಧಿಸಿದ್ದು, ಇದೇ ಜೂ.27ರವರೆಗೆ ಯಥಾಸ್ಥಿತಿ ಕಾಪಾಡಿಕೊಂಡು ಹೋಗುವಂತೆ ಆದೇಶಿಸಿದೆ.

ಮೆಟ್ರೊ ನೌಕರರ ಸಂಘ ನಡೆಸಲು ಉದ್ದೇಶಿಸಿರುವ ಮುಷ್ಕರಕ್ಕೆ ತಡೆ ನೀಡುವಂತೆ ಕೋರಿ ಮೆಟ್ರೊ ರೈಲು ನಿಗಮ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ನ್ಯಾಯಪೀಠ, ಮೆಟ್ರೊ ನೌಕರರ ಸಂಘಕ್ಕೆ ಜೂ.27ರವರೆಗೆ ಯಥಾಸ್ಥಿತಿ ಕಾಪಾಡಿಕೊಂಡು ಹೋಗುವಂತೆ ಆದೇಶಿಸಿತು. 

ವಿಚಾರಣೆ ವೇಳೆ ಮೆಟ್ರೊ ನೌಕರರ ಸಂಘ ಮತ್ತು ಬಿಎಂಆರ್‌ಸಿಎಲ್ ಜೊತೆಗಿನ ಸಭೆ ಕುರಿತ ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಲಾಯಿತು. ಇದೊಂದು ಏಕ ಪಕ್ಷೀಯವಾಗಿ ಸಿದ್ಧಪಡಿಸಿರುವ ವರದಿಯಾಗಿದ್ದು, ಜೂ.8ರ ಸಭೆಯ ಚರ್ಚಾ ಅಂಶಗಳನ್ನು ಬಿಟ್ಟು ಸುಳ್ಳು ವರದಿ ನೀಡಲಾಗಿದೆ ಎಂದು ಸಂಘವು ಆಕ್ಷೇಪ ವ್ಯಕ್ತಪಡಿಸಿತು. ವರದಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಿದ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News