​ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ದಾಳಿ : 30 ಯೋಧರ ಸಾವು

Update: 2018-06-20 08:18 GMT

ಕಾಬೂಲ್ , ಜೂ.20: ಅಫ್ಘಾನಿಸ್ಥಾನದ ಪಶ್ಚಿಮ  ಪ್ರಾಂತ್ಯವಾಗಿರುವ ಬಡ್ಗೀಸ್ ನಲ್ಲಿ ತಾಲಿಬಾನ್ ಉಗ್ರರು ದಾಳಿ ನಡೆಸಿ ಭದ್ರತಾ ಪಡೆಯ 30 ಮಂದಿಯನ್ನು ಹತ್ಯೆ ಮಾಡಿದ್ದಾರೆ.
ಕದನ ವಿರಾಮ ಕೊನೆಗೊಂಡ ಬೆನ್ನೆಲ್ಲೇ ತಾಲಿಬಾನ್ ದಾಳಿ ನಡೆಸಿ ಭದ್ರತಾ ಪಡೆಯ ಸದಸ್ಯರನ್ನು ಕೊಂದು ಹಾಕಿದ್ದಾರೆ.
ಬುಧವಾರ ಬೆಳಗ್ಗಿನ ಜಾವ ತಾಲಿಬಾನ್ ಉಗ್ರರು ಯೋಧರನ್ನು ಗುರಿಯಾಗಿರಿಸಿ ಎರಡು ಭದ್ರತಾ ಠಾಣೆಗಳ ಮೇಲೆ  ದಾಳಿ ನಡೆಸಿರುವುದಾಗಿ ಪ್ರಾಂತೀಯ ಗವರ್ನರ್ ಅಬ್ದುಲ್ ಗಫೂರ್ ಮಾಲಿಕ್ಝೈ ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News