ಫುಟ್ಬಾಲ್ ವಿಶ್ವಕಪ್‌ನಲ್ಲಿ ಸ್ಟಾರ್‌ ಆಟಗಾರರ ಫ್ಲಾಪ್ ಶೋ !

Update: 2018-06-22 10:20 GMT

ಮಾಸ್ಕೊ, ಜೂ.22: ಪೋರ್ಚುಗಲ್‌ನ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನು ಹೊರತುಪಡಿಸಿ ಅರ್ಜೆಂಟೀನದ ಲಿಯೊನೆಲ್ ಮೆಸ್ಸಿ ಸೇರಿದಂತೆ ಫುಟ್ಬಾಲ್ ಜಗತ್ತಿನ ಖ್ಯಾತ ಸ್ಟಾರ್ ಆಟಗಾರರು ಫುಟ್ಬಾಲ್ ವಿಶ್ವಕಪ್‌ನ ಗ್ರೂಪ್ ಹಂತದ ಹಣಾಹಣಿಯಲ್ಲಿ ಏನನ್ನು ಸಾಧಿಸಲಾರದೆ ಕೈ ಸುಟ್ಟುಕೊಂಡಿದ್ದಾರೆ.

ಗಾಯದ ಸಮಸ್ಯೆ ಕೆಲವು ಸ್ಟಾರ್ ಆಟಗಾರರ ಪ್ರದರ್ಶನಕ್ಕೆ ಅಡ್ಡಿಯಾಗಿದೆ. ಅರ್ಜೆಂಟೀನದ ಸೂಪರ್ ಸ್ಟಾರ್ ಮೆಸ್ಸಿ ಅವರು ಆಡಿರುವ ಎರಡು ಪಂದ್ಯಗಳಲ್ಲಿ ಒಂದು ಗೋಲನ್ನು ದಾಖಲಿಸಿಲ್ಲ.
ಕಳೆದ ವರ್ಷ ಅರ್ಜೆಂಟೀನ ದ್ವಿತೀಯ ಸ್ಥಾನ ಪಡೆದಿತ್ತು. ಆದರೆ ಈ ಬಾರಿ ಗ್ರೂಪ್ ಹಂತದ ಸಮರದಲ್ಲೇ ನಿರ್ಗಮಿಸುವ ಆತಂಕ ಎದುರಿಸುತ್ತಿದೆ. ಮೆಸ್ಸಿ ಅವರಿಗೆ ತಂಡದ ಆಟಗಾರರು ಉತ್ತಮ ಬೆಂಬಲ ನೀಡುತ್ತಿಲ್ಲ. ಇದು ಮೆಸ್ಸಿ ಅವರ ಪ್ರದರ್ಶನಕ್ಕೆ ಅಡ್ಡಿಯಾಗಿದೆ.
ಮೆಸ್ಸಿ ಅವರ ಅರ್ಜೆಂಟೀನ ತಂಡ ಮೊದಲ ಪಂದ್ಯದಲ್ಲಿ ಐಸ್‌ಲ್ಯಾಂಡ್ ವಿರುದ್ಧ 1-1 ಗೋಲುಗಳಿಂದ ಡ್ರಾ ಮಾಡಿಕೊಂಡಿತ್ತು. ಗುರುವಾರ ರಾತ್ರಿ ನಡೆದ ಎರಡನೇ ಪಂದ್ಯದಲ್ಲಿ ಕ್ರೊಯೇಶಿಯಾ ವಿರುದ್ಧ 0-3 ಅಂತರದಲ್ಲಿ ಹೀನಾಯ ಸೋಲು ಅನುಭವಿಸಿತು. ಮೆಸ್ಸಿಗೆ ತಂಡದ ಪರ 1 ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ.‘ಡಿ’ ಗುಂಪಿನಲ್ಲಿ 1 ಡ್ರಾ ಮತ್ತು 1 ಸೋಲಿನೊಂದಿಗೆ ಮೂರನೇ ಸ್ಥಾನದಲ್ಲಿರುವ ಅರ್ಜೆಂಟೀನ ತಂಡ ಕೊನೆಯ ಪಂದ್ಯದಲ್ಲಿ ಜೂ.26ರಂದು ನೈಜೀರಿಯಾವನ್ನು ಎದುರಿಸಲಿದೆ.
ಪೋರ್ಚುಗಲ್‌ನ ರೊನಾಲ್ಡೊ ಮಾತ್ರ ತಂಡವನ್ನು ಮುಂದಿನ ಹಂತಕ್ಕೇರಲು ಹೋರಾಡುತ್ತಿದ್ದಾರೆ. ಪೋರ್ಚುಗಲ್ ಪರ ದಾಖಲಾದ ಎಲ್ಲ 4 ಗೋಗಳು ರೊನಾಲ್ಡೊ ಮೂಲಕ ಬಂದಿದೆ. ರೊನಾಲ್ಡೊ ಅವರು ಸ್ಪೇನ್ ವಿರುದ್ಧ 3-3 ಅಂತರದಲ್ಲಿ ಡ್ರಾ ಸಾಧಿಸಿತ್ತು. ರೊನಾಲ್ಡೊ ತಂಡದ ಪರ ಹ್ಯಾಟ್ರಿಕ್ ಗೋಲು ದಾಖಲಿಸಿದ್ದರು.
 ಮೊರಾಕ್ಕೊ ವಿರುದ್ಧ ಎರಡನೇ ಪಂದ್ಯದಲ್ಲಿ ರೋನಾಲ್ಡೊ ದಾಖಲಿಸಿದ ಏಕೈಕ ಗೋಲು ನೆರವಿನಲ್ಲಿ ಪೋರ್ಚುಗಲ್ ಗೆಲುವು ದಾಖಲಿಸಿತ್ತು.
ಈ ಬಾರಿ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡವೆಂದು ಗುರುತಿಸಲ್ಪಟ್ಟಿರುವ ಬ್ರೆಝಿಲ್ ತಂಡದ ನೇಮರ್ ಫಿಟ್ನೆಸ್ ಸಮಸ್ಯೆಯಿಂದ ಹೊರ ಬಂದಿಲ್ಲ.ಅವರ ತಂಡ ಮೊದಲ ಪಂದ್ಯದಲ್ಲಿ ಸ್ಟಿಟ್ಝರ್ಲೆಂಡ್ ವಿರುದ್ಧ ಗೆಲ್ಲಲಿಲ್ಲ.1-1 ಗೋಲುಗಳಿಂದ ಡ್ರಾ ಮಾಡಿತ್ತು. ನೇಮರ್‌ಗೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News