ಮೇಲ್ಮನೆ ಸದಸ್ಯರಾಗಿ ಮರಿತಿಬ್ಬೇಗೌಡ ಪ್ರಮಾಣ ವಚನ ಸ್ವೀಕಾರ
Update: 2018-06-22 18:20 IST
ಬೆಂಗಳೂರು, ಜೂ. 22: ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಇತ್ತೀಚೆಗೆ ಚುನಾಯಿತರಾಗಿದ್ದ ಮೇಲ್ಮನೆ ಮಾಜಿ ಉಪ ಸಭಾಪತಿ ಮರಿತಿಬ್ಬೇಗೌಡ ಅವರು ವಿಧಾನ ಪರಿಷತ್ ನೂತನ ಸದಸ್ಯರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು.
ಶುಕ್ರವಾರ ವಿಧಾನ ಪರಿಷತ್‌ನ ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ ಅವರು ತನ್ನ ಕೊಠಡಿಯಲ್ಲಿ ನೂತನ ಸದಸ್ಯರಾದ ಮರಿತಿಬ್ಬೇಗೌಡ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನವನ್ನು ಬೋಧಿಸಿದರು.
ಮರಿತಿಬ್ಬೇಗೌಡ ಅವರು ಸತ್ಯ-ನಿಷ್ಠೆ, ಮಲೈ ಮಹದೇಶ್ವರ ಸ್ವಾಮಿ ಹೆಸರಿನಲ್ಲಿ ಅಧಿಕಾರದ ಪ್ರಮಾಣ ವಚನ ಸ್ವೀಕರಿಸಿದರು. ಸದಸ್ಯರಾದ ಕಾಂತರಾಜು, ಚೌಡರೆಡ್ಡಿ ತೂಪಲ್ಲಿ, ಮಾಜಿ ಸದಸ್ಯ ರಮೇಶ್ ಬಾಬು, ನೂತನ ಸದಸ್ಯರಿಗೆ ಪುಷ್ಪಾಗುಚ್ಚ ನೀಡಿ ಶುಭ ಕೋರಿದರು.