ಪಿಯು ಉಪನ್ಯಾಸಕರ ನೇಮಕಾತಿ: ವಿಷಯವಾರು ಕರಡು ವೇಳಾಪಟ್ಟಿ ಪ್ರಕಟ

Update: 2018-06-22 13:12 GMT

ಬೆಂಗಳೂರು, ಜೂ.22: 2014ರ ಮೇ 15ರಂದು ಹೊರಡಿಸಿರುವ ಸರಕಾರದ ಅಧಿಸೂಚನೆ ಹಾಗೂ ‘ಕರ್ನಾಟಕ ಸಾಮಾನ್ಯ ಸೇವೆಗಳು(ಪದವಿ ಪೂರ್ವ ಶಿಕ್ಷಣ)(ನೇಮಕಾತಿ)ನಿಯಮಗಳು 2013’ರ ಅನ್ವಯ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರ ಹುದ್ದೆಗಳ ನೇಮಕಾತಿ ಸಂಬಂಧ ರಾಜ್ಯ ಪರೀಕ್ಷಾ ಪ್ರಾಧಿಕಾರವು ಕರಡು ವೇಳಾಪಟ್ಟಿಯನ್ನು ಪ್ರಾಧಿಕಾರದ ವೆಬ್‌ಸೈಟಿನಲ್ಲಿ ಪ್ರಕಟಿಸಿದೆ.

ಪ್ರಕಟಿಸಿರುವ ವಿಷಯವಾರು ಕರಡು ವೇಳಾಪಟ್ಟಿಗೆ ಸಂಬಂಧಿಸಿದಂತೆ ಏನಾದರೂ ಆಕ್ಷೇಪಣೆಗಳಿದ್ದಲ್ಲಿ ಜೂ.28ರ ಒಳಗಾಗಿ ಪ್ರಾಧಿಕಾರಕ್ಕೆ ಸಲ್ಲಿಸಲು ಕೋರಿದೆ. ವಿವರಗಳನ್ನು ಪ್ರಾಧಿಕಾರದ ವೆಬ್‌ಸೈಟ್ http://kea.kar.nic.in ನಲ್ಲಿ ನೋಡಬಹುದಾಗಿದೆ ಎಂದು ಕಾರ್ಯನಿರ್ವಾಹಕ ನಿರ್ದೇಶಕರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News