×
Ad

ರಾತ್ರಿ 8 ಗಂಟೆ ನಂತರ ಶಾಸಕರ ಭವನಕ್ಕೆ ಪ್ರವೇಶ ನಿರ್ಬಂಧ

Update: 2018-06-22 19:43 IST

ಬೆಂಗಳೂರು, ಜೂ.22: ಶಾಸಕರನ್ನು ಭೇಟಿಮಾಡಲು ಆಗಮಿಸುವ ಸಾರ್ವಜನಿಕರು, ಅತಿಥಿಗಳು ಬೆಳಗ್ಗೆ 9 ಗಂಟೆ ಇಂದ ರಾತ್ರಿ 8 ಗಂಟೆಯೊಳಗೆ ಭೇಟಿ ಮಾಡಲು ಅವಕಾಶ ಇರುತ್ತದೆ. ಆದರೆ, ರಾತ್ರಿ 8 ಗಂಟೆಯ ನಂತರ ಶಾಸಕರ ಭವನದಲ್ಲಿ ಶಾಸಕರು ಹೊರತುಪಡಿಸಿ ಬೇರೆಯವರು ತಂಗಬಾರದು ಎಂದು ಸ್ಪೀಕರ್ ಕೆ.ಆರ್.ರಮೇಶ್‌ ಕುಮಾರ್ ಸೂಚನೆ ನೀಡಿದ್ದಾರೆ.

ಈ ಸಂಬಂಧ ಎಲ್ಲ ಶಾಸಕರಿಗೆ ಮನವಿ ಪತ್ರವನ್ನು ರವಾನಿಸಿರುವ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಎಸ್.ಮೂರ್ತಿ, ಹಂಚಿಕೆಯಾಗಿರುವ ಕೊಠಡಿಗಳನ್ನು ಶಾಸಕರು ಹಾಗೂ ಮಾಜಿ ಶಾಸಕರು ಮಾತ್ರ ಬಳಕೆ ಮಾಡಿಕೊಳ್ಳಬೇಕು. ಅವರ ಹೆಸರಿನಲ್ಲಿ ಬೇರೆಯವರು ಬಳಕೆ ಮಾಡಬಾರದು. ಶಾಸಕರ ವಾಹನಗಳು ಮಾತ್ರ ಶಾಸಕರ ಭವನದ ಆವರಣದೊಳಗೆ ನಿಲುಗಡೆ ಮಾಡಬೇಕು, ಶಾಸಕರನ್ನು ಭೇಟಿ ಮಾಡಲು ಆಗಮಿಸುವ ಸಾರ್ವಜನಿಕರು, ಅತಿಥಿಗಳು ತಮ್ಮ ವಾಹನಗಳನ್ನು ಶಾಸಕರ ಭವನದ ದ್ವಾರದ ಹೊರಗಡೆ ನಿಲುಗೆ ಮಾಡಬೇಕು ಎಂದು ಸ್ಪೀಕರ್ ಸೂಚನೆಗಳನ್ನು ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News